ಗದಗ : ನಗರದ ಬೆಟಗೇರಿ ಭಾಗದ ಬಣ್ಣದ ನಗರದ ಮನೆಯೊಂದರಲ್ಲಿ ಅಂದಾಜು 25 ಕ್ವಿಂಟಾಲ್ ಅನ್ನ ಭಾಗ್ಯ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.
ಬೆಟಗೇರಿ ಪಿಎಸ್ ಐ ನೂರಜಾನ್ ಸಾಬರ್ ಮತ್ತು ಗದಗ ನಗರ ಆಹಾರ ಇಲಾಖಾ ಅಧಿಕಾರಿ ಚಿನ್ನಪ್ಪಗೌಡರ ನೇತೃತ್ವದಲ್ಲಿ ಬುಧವಾರ ಸಂಜೆ ದಾಳೆ ನಡೆಸಲಾಗಿದೆ. ಬಣ್ಣದ ನಗರದ ಖಾನ್ ಸಾಬ್, ರಾಜೇಸಾಬ್ ಖಾದನ್ನವರ ಎಂಬುವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಅನ್ನಭಾಗ್ಯ ಅಕ್ಕಿ ಜಪ್ತಿಮಾಡಲಾಗಿದೆ ಪೊಲೀಸ್ ಅಧಿಕಾರಿಗಳು ಆರೋಪಿ ಖಾನಸಾಬ್ ಖಾದನ್ನವರನ್ನು ವಶಕ್ಕೆ ಪಡೆದಿದ್ದಾರೆ ಬೆಟಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.