ವರದಕ್ಷಿಣೆ ಕಿರುಕುಳ 5 ತಿಂಗಳ ಹಿಂದೆ ಮದುವೆ ಆಗಿದ್ದ ನವ ವಿವಾಹಿತೆ ಮನೆಯಲ್ಲಿ ನೇಣಿಗೆ ಶರಣು;ಗಂಡನ ಮನೆಯವರು ಎಸ್ಕೆಪ್

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ 5 ತಿಂಗಳ ಹಿಂದಷ್ಟೇ ಮದುವೆಯಾಗಿದ ನವ ವಿವಾಹಿತೆ ವರದಕ್ಷಿಣೆ ಕಿರುಕುಳ ತಾಳಲಾಗದೆ ಮನೆಯಲ್ಲಿನ ಪ್ಯಾನಗೆ ನೇಣು ಹಾಕಿಕೊಂಡ ಘಟನೆ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ಉಮಾ ವಿಷ್ಣು ಎಮ್ಮಿ (23) ಆತ್ಮಹತ್ಯೆ‌ ಮಾಡಿಕೊಂಡ ದುರ್ದೈವಿ ಹೆಣ್ಣು ಮಗಳು ಮಂಗಳವಾರ ರಾತ್ರಿ ಬೆಡ್ ರೂಮ್‌ನಲ್ಲಿರುವ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆ ಬಳಿಕ ಗಂಡ, ಅತ್ತೆ ಸೇರಿದಂತೆ ಮನೆಯವರು ಗ್ರಾಮದಿಂದ ಎಸ್ಕೇಪಯಾಗಿ ಊರು ಬಿಟ್ಟಿದ್ದಾರೆ ಮೃತ ಮಹಿಳೆಯ ಪೋಷಕರು ಆಕೆಯ ಪತಿ, ಅತ್ತೆಯನ್ನು‌ ಕರೆತರುವಂತೆ ಶವ ಸಾಗಿಸುವ ಆ್ಯಂಬುಲೆನ್ಸ ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿಮ್ಮಾಪುರ ಗ್ರಾಮದ ನಿವಾಸಿಯಾದ ಮೃತಳ ಪತಿ ವಿಷ್ಣು, ಅತ್ತೆ ಗಿರಿಜಾ ಕರೆತರುವಂತೆ ಪೋಲಿಸ ಅಧಿಕಾರಿಗಳಿಗೆ ಪಟ್ಟು ಹಿಡಿದ್ದಾರೆ ಪೋಷಕರು.

ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಕುರಿತು ಮೃತ ಮಹಿಳೆ ಉಮಾ ಸಹೋದರ ಗದಗ ಗ್ರಾಮೀಣ ಪೋಲಿಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ನಡೆಸಿದ್ದಾರೆ.

ಗಮಡನ ಮನೆಯವರು ಹೇಳಿದಂತೆ ಮದುವೆ ಸಮಯದಲ್ಲಿ ವರದಕ್ಷಿಣೆ ನೀಡಿದ್ದೇವೆ ಅವರು ಮತ್ತೆ ನಮ್ಮ ಮಗಳಿಗೆ ಹೆಚ್ಚಿನ ವರದಕ್ಷಿಣೆ ಕೊಡು ಅಂತ ನಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದರು 4 ಲಕ್ಷರೂ ಪೈಕಿ 3,50,00 ಲಕ್ಷರೂ ಹೆಚ್ಚುವರಿಯಾಗಿ ಕೊಟ್ಟಿದ್ದೇವೆ 50,000 ರೂ ನೀಡುವಂತೆ ಕಿರುಕುಳ ನೀಡಿ ನಮ್ಮ ಮಗಳನ್ನು ಸಾಯಿಸಿಬಿಟ್ಟರು ಎಂದು ಮೃತ ಮಹಿಳೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Article