ಶಿರಹಟ್ಟಿ: ಒಣಗಿದ ಬೆಳೆ, ತೀರದ ಸಾಲ, ಮನನೊಂದು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ನಡೆದಿದೆ.
ನೀಲಪ್ಪ ಗೊರವರ್ (38) ಆತ್ಮಹತ್ಯೆಗೆ ಶರಣಾದ ರೈತ ತನ್ನದೇ ಜಮೀನಿನಲ್ಲಿ ಇರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ರೈತ 9 ಎಕರೆ ಜಮೀನು ಹೊಂದಿದ್ದ ಈ ಬಾರಿ ಮುಸುಕಿನ ಜೋಳ ಬೆಳೆದಿದ್ದ ಆದರೆ ಸಕಾಲದಲ್ಲಿ ಮಳೆ ಬಾರದೆ ಬೆಳೆಗಳು ಒಣಗಿದರಿಂದ ಕಂಗಾಲಾಗಿದ್ದ ರೈತ ಇದನ್ನೇ ನಂಬಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ರೈತ ಕೆವಿಜಿ ಬ್ಯಾಂಕ್ ನಲ್ಲಿ 2 ಲಕ್ಷ ರೂ. ಸಾಲ, ಕೈಗಡ 5 ಲಕ್ಷ ಸಾಲ ಮಾಡಿದ್ದ ಅತಿಯಾದ ಸಾಲವನ್ನು ತೀರಿಸಲು ಪರದಾಡುತ್ತಿದ್ದ ಇನ್ನೊಂದೆಡೆ ಕೈ ಕೊಟ್ಟ ಮಳೆಯಿಂದ ಬೆಳೆ ನಾಶದಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಶಿರಹಟ್ಟಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.