ಗದಗ: ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಜಿಲ್ಲಾಧ್ಯಂತ ಇರುವ ಗಣಪತಿ ತಯಾರಕರು ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸಿ ಒಂದೇ ಸೂರಿನಡಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ.
ಕಳೆದ ಒಂದು ವಾರದಿಂದ ಮುಂಚಿತವಾಗಿರುವಾಗಲೇ ವಿಘ್ನೇಶ್ವರನ ಮೂರ್ತಿ ಖರೀದಿ ಸಾರ್ವಜನಿಕರು ಒಲವು ತೋರಿದ್ದು ತಮಗೆ ಇಷ್ಟವಾದ ಗಣಪತಿ ಮೂರ್ತಿಗಳನ್ನ ಬುಕ್ ಮಾಡಿದಾರೆ.
ಜಿಲ್ಲಾ ಗಣೇಶನ ಮೂರ್ತಿ ತಯಾರಕರ ಸಂಘ ವತಿಯಿಂದ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಒಂದೇ ಸೂರಿನಡಿ ಗಣೇಶ ವಿಗ್ರಹಗಳ ಮರಾಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಗದಗ-ಬೆಟಗೇರಿ ನಗರ ಸೇರಿದಂತೆ ಸುತ್ತಲ ಜಿಲ್ಲೆಯ ಕಲಾವಿದರು ತಾವು ತಯಾರಿಸಿದ ಮೂರ್ತಿಗಳನ್ನ ಇಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ.
ನಾಲ್ಕು ಅಡಿ ಎತ್ತರದ ವರೆಗಿನ ಗಣಪತಿ ಲಭ್ಯ:
ಗದಗ-ಬೆಟಗೇರಿ ಸೇರಿದಂತೆ ಧಾರವಾಡ, ಲಕ್ಷ್ಮೇಶ್ವರ, ಹಾವೇರಿಯಿಂದ ಕಲಾವಿದರು ಆಗಮಿಸಿ ಇಲ್ಲಿ ಮೂರ್ತಿ ಮಾರಾಟ ಮಾಡುತ್ತಿದ್ದು 10 ಇಂಚು ಎತ್ತರ ದಿಂದ ಹಿಡಿದು ನಾಲ್ಕು ಅಡಿ ಎತ್ತರದ ವರೆಗಿನ ಮೂರ್ತಿಗಳು ಇಲ್ಲಿ ಸಿಗುತ್ತವೆ. 200 ರೂಪಾಯಿ ಯಿಂದ 13 ಸಾವಿರ ರೂಪಾಯಿ ವರೆಗೆ ಗಣಪತಿಯ ಮೂರ್ತಿಗಳಿಗೆ ದರ ನಿಗದಿ ಮಾಡಲಾಗಿದೆ.
ವಿವಿಧ ಬಗೆಯ ಗಣೇಶ ಮೂರ್ತಿಗಳು:
ದಗ್ಡುಶೇಟ್, ರಾಜಾ ಗಣಪತಿ, ಬಾಲ ಗಣೇಶ, ಸಿದ್ದಿವಿನಾಯಕ, ಪದ್ಮಾಸನ, ಸಿಂಹಾಸನಾರೂಢ ಸೇರಿದಂತೆ ವಿವಿಧ ಬಗೆ, ವಿನ್ಯಾಸದ ಗಣಪತಿಗಳನ್ನ ಮಾರಾಟಕ್ಕೆ ಇಡಲಾಗಿದೆ. ವಿವಿಧ ವಿಗ್ರಹ ನೋಡಿ ಕೊಳ್ಳಲು ಬಯಸುವ ಜನರು ಇಲ್ಲಿಗೆ ಬಂದು ವಿಗ್ರಹ ಖರೀದಿ ಮಾಡುತ್ತಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳ ತಯಾರಿ ಮಾರಾಟ ವಿರುದ್ಧ ಹೋರಾಟ ಮಾಡಿದ್ದ ಗದಗ ಮೂರ್ತಿ ತಯಾರಕರ ಸಂಘ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರಿಗೆ ಉತ್ತೇಜನ ನೀಡುತ್ತಾ ಬಂದಿದೆ. ಒಂದೇ ಸೂರಿನಡಿ ಮಣ್ಣನ ಮೂರ್ತಿ ಮಾರಾಟಕ್ಕೆ ಅವಕಾಶ ಮಾಡಿದ್ದು ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿದ್ದೇವೆ ಸುಮಾರು ಒಂಭತ್ತು ವರ್ಷದಿಂದ ಒಂದೇ ಸೂರಿನಡಿ ಗಣೇಶ ಮೂರ್ತಿಗಳ ಮಾರಾಟ ಮಾಡಿಕೊಂಡು ಬರುತ್ತಿದ್ದೆವೆ ಎಂದು ವಿಘ್ನೇಶ್ವರ ಮೂರ್ತಿ ತಯಾರಕರ ಸಂಘದ ಮುಖಂಡರಾದ ಮುತ್ತಣ್ಣ ಭರಡಿ ಹೇಳಿದ್ದಾರೆ.