ಗಜೇಂದ್ರಗಡ : ನಗರದ ಪಾಲಿಟೆಕ್ನಿಕ್ ಕಾಲೇಜು ಎದುರಿಗೆ ಇರುವ ಖಾಸಗಿ ಡಾಬಾ ಒಂದರಲ್ಲಿ ರೋಣ ಸಿಡಿಪಿಒ ಮತ್ತು ಎಫ್ಡಿಸಿ ಜಗದೀಶ ಇಬ್ಬರು ಸೇರಿ 1.5 ಲಕ್ಷ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ರೋಣ ತಾಲೂಕಿನ ಸಿ.ಡಿ.ಪಿ.ಒ.ಬಸಮ್ಮ ಹೂಲಿ ಮೇಲೆ ಲೋಕಾಯುಕ್ತ ಕಚೇರಿಯಲ್ಲಿ ಮೊದಲೇ ದಾಖಲಾದ ದೂರಿನ ಅನ್ವಯದಲ್ಲಿ ದಾಳಿ ಮಾಡಲಾಗಿದೆ ಇಂದು ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಡಿ.ಎಸ್.ಪಿ ಶಂಕರ ರಾಗಿ ನೇತೃತ್ವ ದಲ್ಲಿ ದಾಳಿ ನಡೆಸಲಾಗಿದ್ದು ರೋಣ ತಾಲೂಕಾ ಸಿ.ಡಿ.ಪಿ.ಒ ಬಸಮ್ಮ ಹೂಲಿ ಕಛೇರಿ ಎಫ್ಡಿಸಿ ಜಗದೀಶ ಬಲೆಗೆ ಬಿದ್ದಿದ್ದಾರೆ.
ಹೆಚ್ಚಿನ ವಿಚಾರಣೆಗೆ ರೋಣಕ್ಕೆ ಕರೆದ್ಯೊದ ಲೋಕಾಯುಕ್ತ ಸಿಬ್ಬಂದಿ.ಮತ್ತಷ್ಟು ಮಾಹಿತಿಯನ್ನು ಕಲೆಹಾಕುತ್ತಿರುವ ಲೋಕಾಯುಕ್ತ ಸಿಬ್ಬಂದಿ.