ಬೆಂಗಳೂರು: ರೋಹಿಣಿ ಸಿಂಧೂರಿಗೆ ಹೊಸ ಹುದ್ದೆ ಸೃಷ್ಟಿಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಹೊಸ ಹುದ್ದೆ ಸೃಷ್ಟಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೆಲತಿಂಗಳ ಹಿಂದೆ ಪ್ರಕರಣ ಒಂದರಲ್ಲಿ ವಿವಾದಕ್ಕೆ ಸಿಲುಕಿದ್ದ ಬಳಿಕ ಯಾವುದೇ ಹುದ್ದೆ ನೀಡದೆ ಸರ್ಕಾರ ವರ್ಗಾವಣೆ ಮಾಡಿತ್ತು. ಇದೀಗ ಮುಖ್ಯ ಸಂಪಾದಕರು ಗೆಜೆಟಿಯರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಬುಧವಾರ ರಾಜ್ಯದ ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. ಈ ವೇಳೆ ಹಲವು ದಿನಗಳಿಂದ ಹುದ್ದೆಗಾಗಿ ಕಾದು ಕುಳಿತಿದ್ದ ರೋಹಿಣಿ ಸಿಂಧೂರಿ ಅವರಿಗೆ ಹುದ್ದೆ ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈಗಿನಿಂದ ಮುಂದಿನ ಆದೇಶದವರೆಗೂ ಅವರು ಕರ್ನಾಟಕ ಗೆಜೆಟಿಯರ್ ಇಲಾಖೆಯ ಮುಖ್ಯ ಸಂಪಾದಕರು ಹುದ್ದೆ ನಿರ್ವಹಿಸುವಂತೆ ಸೂಚಿಸಲಾಗಿದೆ.