ನಗರಸಭೆಯ 28 ನೇ ವಾರ್ಡ ಸದಸ್ಯನ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿ : ಡಿಸಿ ಆದೇಶ

ಸಮಗ್ರ ಪ್ರಭ ಸುದ್ದಿ
1 Min Read

ಗದಗ. ನಗರದ 28 ನೇ ವಾಡಿರ್ನ ಹಾಲಿ ಬಿಜೆಪಿ ನಗರಸಭೆ ಸದಸ್ಯ ಸಿದ್ದಲಿಂಗಪ್ಪ(ಅನಿಲ್​) ಅಬ್ಬಿಗೇರಿ ಅವರ ಜಾತಿ ಪ್ರಮಾಣ ಪ್ರಮಾಣ ಪತ್ರ ರದ್ದು ಮಾಡಿ ಇಂದು ಸೆ.7 ರಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​ ಆದೇಶಿಸಿದ್ದಾರೆ.

ಸದ್ಯ ಬಿಜೆಪಿ ನಗರ ಮಂಡಳ ಅಧ್ಯಕ್ಷ ಆಗಿರುವ ಅನಿಲ್​ ಅಬ್ಬಿಗೇರಿ ಅವರು ಕಳೆದ ನಗರಸಭೆ ಚುನಾವಣೆಯಲ್ಲಿ 28 ನೇ ವಾಡಿರ್ನಿಂದ ಸ್ಪಧಿರ್ಸಿ ಗೆಲುವು ಸಾಧಿಸಿದ್ದರು. ಅಂದಿನಿಂದಲೇ ಇವರ ಸಮೀಪದ ಪ್ರತಿ ಸ್ಪರ್ಧಿ ಮಹಾಲಕ್ಷ್ಮಿ ಡಂಬಳ ಗೆಲವು ಸಾಧಿಸಿದ ಅನಿಲ ಅಬ್ಬಿಗೇರಿ ಇವರ ಜಾತಿ ಪ್ರಮಾಣ ಪತ್ರದ ನೈಜತೆ ಕುರಿತಾಗಿ ಮಹಾಲಕ್ಷ್ಮಿ ನ್ಯಾಯಾಲಯದ ಮೊರೆ ಹೋಗಿದ್ದರು.

ಏನಿದು ಆರೋಪ:
ಹಾಲಿ ಸದಸ್ಯ ಅನಿಲ ಅಬ್ಬಿಗೇರಿ ಅವರ ಕುಟುಂಬದವರು 2ಎ (ಗಾಣಿಗ) ಜಾತಿಗೆ ಒಳಪಟ್ಟಿಲ್ಲ ಅವರು ಹಿಂದೂ ಲಿಂಗಾಯತರು ಎಂದು ಮಹಾಲಕ್ಷ್ಮಿ ಅವರ ಆರೋಪವಾಗಿತ್ತು ಅದಿನಿಂದ ಶುರುವಾದ ಕಾನೂನು ಸಮರ
ಕಳೆದ ಜು.7 ರಂದು ತಹಸೀಲ್ದಾರ ನೇತೃತ್ವದಲ್ಲಿ ನಡೆದ ಜಂಟಿ ಸ್ಥಳ ತನಿಖಾ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿತ್ತು ಆ ವರದಿ ಅನ್ವಯ ಅನಿಲ ಅಬ್ಬಿಗೇರಿ ಅವರ 2ಎ ಜಾತಿ ಪ್ರಮಾಣ ಪತ್ರವನ್ನು ಇಂದು ಜಿಲ್ಲಾಧಿಕಾರಿ ಎಂ ಎನ್ ವೈಶಾಲಿ ರದ್ದು ಮಾಡಿ ಆದೇಶಿಸಿದ್ದಾರೆ.

ಈ ಕುರಿತು ಮಾತನಾಡಿದ ಅನಿಲ ಅಬ್ಬಿಗೇರಿ ಜಿಲ್ಲಾಧಿಕಾರಿ ಆದೇಶದ ಪ್ರಶ್ನಿಸಿ ಕಾನೂನು ಸಮರ ಮುಂದುವರಿಸುತ್ತೇನೆ ನಗರಸಭೆಯಲ್ಲಿ ಪ್ರಭಾವಿ ಆಗಿರುವ ಹಿನ್ನೆಲೆ ನನ್ನ ವಿರುದ್ಧ ರಾಜಕೀಯ ಷಢ್ಯಂತ್ರ ನಡೆದಿದೆ. ಕಾಂಗ್ರೆಸ್ಸಿನ ಪ್ರಭಾವಿ ನಾಯಕರು ನನ್ನ ವಿರುದ್ಧ ಷಢ್ಯಂತ್ರ ರೂಪಿಸಿದ್ದಾರೆ. ನಗರಸಭೆಯಲ್ಲಿ ಕಾಂಗ್ರೆಸ್​ ಆಳ್ವಿಕೆ ತರಲು ಈ ಹುನ್ನಾರ ನಡೆದಿದೆ ಎಂದು ಅನಿಲ ಅಬ್ಬಿಗೇರಿ ಆರೋಪಿಸಿದ್ದಾರೆ.

Share this Article