ಗದಗ: ಚಲಿಸುತ್ತಿದ್ದ ರೈಲುಗೆ ಎದುರು ಬಂದು ಡಿಕ್ಕಿ ಹೊಡೆದು, ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ, ಸೋಂಪುರ ಮಧ್ಯೆ ನಡೆದಿದೆ. 34 ವರ್ಷದ ಅಕ್ಕಮ್ಮ ತಿರಕಪ್ಪ ಕಿವಡಿ ಎಂಬ ಮಹಿಳೆ ಮೃತ ದುರ್ದೈವಿ. ಇವರು ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಹುಬ್ಬಳ್ಳಿ ಯಿಂದ ಕಾರಟಗಿ ಕಡೆಗೆ ಚಲಿಸುತ್ತಿದ್ದ ರೈಲುಗೆ ಎದುರು ಬಂದು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇವರು ಕೆ.ಎಸ್.ಆರ್.ಟಿ.ಸಿ ಧಾರವಾಡ ನಗರ ಘಟಕದಲ್ಲಿ ನಿರ್ವಾಹಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಕಳೆದ ನಾಲ್ಕೈದು ವರ್ಷದಿಂದ ಚರ್ಮ ರೋಗ, ಸೋರಿಯಾಸಿಸ್ ಕಾಯಿಲೆಯಿಂದ ಬಳಲುತ್ತಿದ್ದಳು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂಬ ಆರೋಪ ಮೃತಳ ಕುಟುಂಬಸ್ಥರದ್ದಾಗಿದೆ. ಒಂದು ದಿನ ರಜೆ ಗೆಂದು ಧಾರವಾಡದಿಂದ ತಿಮ್ಮಾಪೂರ ಸ್ವ ಗ್ರಾಮಕ್ಕೆ ಬಂದಿದ್ದಳು. ಜಮೀನಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದಾಳೆ. ಆದ್ರೆ ಇಲ್ಲಿ ರೈಲುಗೆ ಸಿಲುಕಿ ಮೃತಪಟ್ಟಿದ್ದಾಳೆ.

ಮೃತ ಮಹಿಳೆ ಬೆಂಗಳೂರ ಬಿಎಂಟಿಸಿ ನಲ್ಲಿ 10 ವರ್ಷ ಕೆಲಸ ಮಾಡಿ, ಧಾರವಾಡ ಕೆ.ಎಸ್.ಆರ್.ಟಿ.ಸಿ ವಿಭಾಗದಲ್ಲಿ ನಗರ ಘಟಕದಲ್ಲಿ ಕಳೆದ 1 ವರ್ಷ ದಿಂದ ಕೆಲಸ ಮಾಡುತ್ತಿದ್ದಳು. ಸ್ಥಳಕ್ಕೆ ರೈಲ್ವೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

