ಮುಂಡರಗಿ: ಗದಗ್ ಜಿಲ್ಲಾ ಮುಂಡರಗಿ ತಾಲೂಕಿನ ಹಳ್ಳಿಗುಡಿ ಹಾಲ್ಟ್ ರೈಲ್ವೆ ಸ್ಟೇಷನ್ ಅನ್ನು ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರು ಶುಕ್ರವಾರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಈ ವೇಳೆ ಮಾತನಾಡಿದ ಅವರು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹಳ್ಳಿಗುಡಿ ರೈಲ್ವೇ ಸ್ಟೇಷನ್ ಅನ್ನು ನನ್ನ ಅಧಿಕಾರ ಅವಧಿಯಲ್ಲಿ ಉದ್ಘಾಟಿಸಿದ್ದು ನನಗೆ ಅತ್ಯಂತ ಸಂತೋಷ ನೀಡಿದೆ ನಿಮ್ಮೆಲ್ಲರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ರೈಲ್ವೆ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಈ ಭಾಗದ ಸುತ್ತಮುತ್ತಲಿನ ಗ್ರಾಮದ ರೈತರಿಗೆ ವಿದ್ಯಾರ್ಥಿಗಳಿಗೆ ಗದಗ್ ಹುಬ್ಬಳ್ಳಿ ಕೊಪ್ಪಳ ಬಳ್ಳಾರಿ ಹೋಗುವವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು.
ನನ್ನ ಅಧಿಕಾರವಧಿಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ 2700 ಕೋಟಿ ರೂಪಾಯಿ ಬಂದಿರುವುದು ಒಂದು ದಾಖಲೆಯಾಗಿದೆ ಇನ್ನೂ ಬೆಳೆ ವಿಮೆಯಲ್ಲಿ ಹಾವೇರಿ ಜಿಲ್ಲೆಗೆ 958 ಕೋಟಿ ರೂ ಗದಗ ಜಿಲ್ಲೆಗೆ 1214 ಕೋಟಿ ರೂಪಾಯಿ ಬಂದಿದೆ. ಜಲಜೀವನ್ ಯೋಜನೆಯಲ್ಲಿ ಇಡೀ ರಾಜ್ಯದಲ್ಲಿ ಗದಗ್ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ ಈ ಎಲ್ಲಾ ಕಾರ್ಯಗಳನ್ನು ನಿಮ್ಮೆಲ್ಲರ ಆಶೀರ್ವಾದದಿಂದ ಮಾಡಿದ್ದೇನೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್,ಮುಂಡರಗಿ ತಾಲೂಕು ದಂಡಾಧಿಕಾರಿಗಳಾದ ಧನಂಜಯ್ ಮಾಲಗಿತ್ತಿ,ರೈಲ್ವೆ ಅಧಿಕಾರಿಗಳಾದ ಸಂತೋಷ ವರ್ಮ,ಸಂತೋಷ್ ಜಿ, ಹಳ್ಳಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮರಿಯವ್ವ ನೀ ಹಿರೇಮನಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.