ಬೀಜಿಂಗ್ : ವಿಚಿತ್ರ ಹಾಗು ಅಚ್ಚರಿಯ ಘಟನೆಯೊಂದು ಚೀನಾದಲ್ಲಿ ಬೆಳಕಿಗೆ ಬಂದಿದ್ದು ಯುವಕನೊಬ್ಬ ತನ್ನ ಗೆಳತಿಯನ್ನು ಚುಂಬಿಸಿ ಶ್ರವಣ ಶಕ್ತಿಯನ್ನೇ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ನ ವರದಿ ಪ್ರಕಾರ ಗೆಳತಿಗೆ 10 ನಿಮಿಷ ಮುತ್ತು ಕೊಟ್ಟ ಬಳಿಕ ಯುವಕನಿಗೆ ಕಿವಿನೋವು ಕಾಣಿಸಿಕೊಂಡಿದೆ, ಕ್ರಮೇಣವಾಗಿ ಶ್ರವಣ ಶಕ್ತಿ ನಷ್ಟವಾಗಿದೆ.
ಗಾಬರಿಯಿಂದ ಯುವತಿ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಕಿವಿಯೊಳಗೆ ರಂಧ್ರವಿದೆ ಎಂದು ವೈದ್ಯರು ಹೇಳಿದ್ದಾರೆ. ಇಬ್ಬರು ಚೀನಾದ ಪೂರ್ವ ಜೆಜಿಯಾಂಗ್ ಪ್ರಾಂತ್ಯದ ವೆಸ್ಟ್ ಲೇಕ್‍ಗೆ ಭೇಟಿ ನೀಡಿದ್ದರು, ಅಲ್ಲಿ ಘಟನೆ ನಡೆದಿದೆ. ಹೆಚ್ಚು ಉತ್ಸಾಹದಿಂದ ಚುಂಬಿಸುವುದರಿಂದ ಇಂತಹ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಬಲವಾಗಿ ಚುಂಬಿಸುವುದರಿಂದ ದೇಹದಲ್ಲಿ ನಡುಕ ಉಂಟಾಗುತ್ತದೆ, ಇದರಿಂದಾಗಿ ಕಿವಿ ಹಿಗ್ಗುತ್ತದೆ ಇದರಿಂದ ಸಮಸ್ಯಯಾಗಿದೆ ಆದರೆ ಗುಣಪಡಿಸಬಹುದು ಸಂಪೂರ್ಣ ಚೇತರಿಸಿಕೊಳ್ಳಲು ಎರಡು ತಿಂಗಳು ಬೇಕು ಎಂದು ವೈದ್ಯರು ಹೇಳಿದ್ದಾರೆ.
ಈ ಹಿಂದೆ 2008 ರಲ್ಲಿ, ದಕ್ಷಿಣ ಚೀನಾದಲ್ಲಿ ಯುವತಿಯೊಬ್ಬಳಿಗೆ ಇದೇ ರೀತಿ ಆಗಿತ್ತು. ಚುಂಬಿಸಿದ ನಂತರ ಶ್ರವಣ ಶಕ್ತಿ ಕಳೆದುಕೊಂಡಿದ್ದಳು ಇನ್ನೊಂದು ಘಟನೆಯಲ್ಲಿ ಕಳೆದ ತಿಂಗಳು ದಕ್ಷಿಣ ಚೀನಾದಲ್ಲಿ ಮನೆಯಲ್ಲಿ ಟಿವಿ ನೋಡುತ್ತಿರುವಾಗ ಮಹಿಳೆಯೊಬ್ಬಳು ತಮ್ಮ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದರು.