ವಾಹನ ಅಪಘಾತಗಳಿಂದಲೇ ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ ಒಂದೂವರೆ ಲಕ್ಷ ಜನ

ಸಮಗ್ರ ಪ್ರಭ ಸುದ್ದಿ
1 Min Read

ಬೆಂಗಳೂರು :  ಸರ್ಜಿಕಲ್ಸ ಸೊಸೈಟಿ ಆಫ್ ಬೆಂಗಳೂರಿನ 50 ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹಳೆಯ ಮತ್ತು ನೂತನ 200 ಕಾರುಗಳ ಜಾಥ ವನ್ನು ಇಂದು ವಿಧಾನಸೌಧ ಮುಂಬಾಗದಿಂದ ನಂದಿಬೆಟ್ಟದವರಗೆ ಹಮ್ಮಿಕೊಳ್ಳಲಾಗಿತ್ತು.

ಈ ಜಾಥಗೆ ಚಾಲನೆ ನೀಡಿದ ಆರ್ಥಿಕ ಅಪರಾಧಗಳ ವಿಶೇಷ ಘಟಕದ ಡಿಜಿಪಿ (ಸಿಐಡಿ) ಡಾ.ಎಂ.ಎ.ಸಲೀಂ ಮಾತನಾಡಿ, 1 ಲಕ್ಷ 50 ಸಾವಿರ ಜನರು ಪ್ರತಿವರ್ಷ ವಾಹನ ಅಪಘಾತದಿಂದ ಮರಣ ಹೊಂದುತ್ತಾರೆ ಮತ್ತು 6 ಲಕ್ಷ ಜನರು ಅಪಘಾತದಿಂದ ದೇಹಕ್ಕೆ ಗಂಭೀರ ಗಾಯದಿಂದ ನರಳುತ್ತಾರೆ, ಲಕ್ಷಾಂತರ ಜನರ ಜೀವ ಕಳೆದುಕೊಳ್ಳುತ್ತಾರೆ. ಅದರಲ್ಲಿ ಬದುಕಿದವರು ಅಂಗಾಂಗ ನ್ಯೂನತೆಯಿಂದ ಜೀವನಪೂರ್ತಿ ನರಳುತ್ತಾರೆ ಎಂದರು.

ಅಪಘಾತಗಳು ಹೆಲ್ಮೆಟ್ ಧರಸಿದೆ ಇರುವುದು, ಅತಿ ವೇಗದ ಚಾಲನೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಹಾಗೂ ಸೀಟ್ ಬೆಲ್ಟï ಧರಿಸದೇ ಇರುವುದು ಇಂಥವುಗಳಿಂದ ರಸ್ತೆ ಅಪಘಾತವಾಗುತ್ತಿದೆ. ಸಾರ್ವಜನಿಕರು ವಾಹನಗಳನ್ನು ಸುರಕ್ಷತೆಯಿಂದ ಚಾಲನೆ ಮಾಡಬೇಕು ಎಂದು ಹೇಳಿದರು.

ಸರ್ಜಿಕಲ್ಸ ಸೊಸೈಟಿ ಅಧ್ಯಕ್ಷರಾದ ವೆಂಕಟೇಶ್ ಮಾತನಾಡಿ, ರಸ್ತೆ ಸುರಕ್ಷತೆ ಕುರಿತ ಜಾಗೃತಿ ಜಾಥದಲ್ಲಿ ವಿಂಟೇಜ್, ರೋಲ್ಸ ರಾಯ, ಬೆನ್ಜ್, ಮಾರುತಿ ಕಾರು ಪರಿಸರ ಸ್ನೇಹಿ ಕಾರುಗಳು ಭಾಗವಹಿಸಿದೆ.

ಸಾರ್ವಜನಿಕರು ವಾಹನ ಚಲಾಯಿಸುವ ರಸ್ತೆ ಸುರಕ್ಷತೆ ನಿಯಗಳನ್ನು ಸರಿಯಾಗಿ ಪಾಲನೆ ಮಾಡಿದರೆ, ರಸ್ತೆ ಅಪಘಾತವಾಗುವುದಿಲ್ಲ ಎಂದರು. ಸರ್ಜಿಕಲ್ ಸೊಸೈಟಿಯ ಕಾರ್ಯದರ್ಶಿ ಮನೀಶ್ ಜೋಷಿ, ನಿರ್ದೇಶಕರಾದ ಡಾ.ಮುಬಾರಕ್ ಖಾನ್, ಕೆ.ಎಸ್.ಸಿ.ಎ.ಎಸ್.ಐ ಮಾಜಿ ಅಧ್ಯಕ್ಷರಾದ ಡಾ.ಶಿವರಾಂ ಮತ್ತಿತರರು ಇದ್ದರು.

Share this Article