ಹಾಡಹಗಲೇ ವಿದ್ಯಾರ್ಥಿನಿಗೆ ಚಾಕು ಇರಿದು ಕಾರಿನಲ್ಲಿ ಅಪಹರಣ 2ತಾಸಿನಲ್ಲೇ ಆರೋಪಿಗಳನ್ನು ಬಂಧಿಸಿದ ಪೋಲಿಸರು

ಸಮಗ್ರ ಪ್ರಭ ಸುದ್ದಿ
1 Min Read

ರಾಮನಗರ : ಕಾಲೇಜಿಗೆ ಹೋಗುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯನ್ನು ದುಷ್ಕರ್ಮಿ ಚಾಕುವಿನಿಂದ ಇರಿದು ಕಾರಿನಲ್ಲಿ ಅಪಹರಿಸಿದ್ದ ಘಟನೆ ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ರಾಮನ:2 ಗಂಟೆಯಲ್ಲಿಯೇಗರ ಐಬಿ ರಸ್ತೆಯಲ್ಲಿರುವ ಬಾಲಕಿಯರ ಜೂನಿಯರ್ ಕಾಲೇಜು ಬಳಿ ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ದುಷ್ಕರ್ಮಿ ಕಾರನ್ನು ಚೇಸ್ ಮಾಜಿ 11 ಗಂಟೆ ವೇಳೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಬೆಳಗ್ಗೆ ಎಂದಿನಂತೆ ವಿದ್ಯಾರ್ಥಿನಿ ಕಾಲೇಜಿಗೆ ಸ್ನೇಹಿತೆಯರೊಂದಿಗೆ ಹೋಗುತ್ತಿದ್ದಾಗ ರಸ್ತೆ ಬದಿ ಇನ್ನೋವಾ ಕಾರು ನಿಲ್ಲಿಸಿಕೊಂಡು ನಿಂತಿದ್ದ ದುಷ್ಕರ್ಮಿ ಏಕಾಏಕಿ ಆಕೆಯನ್ನು ಎಳೆದುಕೊಂಡು ಕಾರಿನೊಳಗೆ ಕೂರಿಸಲು ಯತ್ನಿಸಿದ್ದಾನೆ. ತಕ್ಷಣ ಆಕೆ ಸಹಾಯಕ್ಕಾಗಿ ಕೂಗಿಕೊಂಡು ವಿರೋಧ ವ್ಯಕ್ತಪಡಿಸಿದಾಗ ದುಷ್ಕರ್ಮಿ ಆಕೆಗೆ ಚಾಕುವಿನಿಂದ ಇರಿದು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಪರಾರಿಯಾಗಿದ್ದಾನೆ.

ನೋಡ ನೋಡುತ್ತಿದ್ದಂತೆ ವಿದ್ಯಾರ್ಥಿನಿಯನ್ನು ಅಪಹರಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಲು ಯತ್ನಿಸಿದರಾದರೂ ಸಾಧ್ಯವಾಗಿಲ್ಲ. ಕಾರನ್ನು ತಡೆಯಲು ಕಾರಿನ ಮೇಲೆ ಸ್ಥಳೀಯರು ಕಲ್ಲುಗಳನ್ನು ತೂರಿದರಾದರೂ ದುಷ್ಕರ್ಮಿ ಯಾವುದೇ ಭಯವಿಲ್ಲದೆ ಯುವತಿಯನ್ನು ಅಪಹರಿಸಿದ್ದಾನೆ.

ಪೊಲೀಸರಿಂದ ಚೇಸ್- ವಿದ್ಯಾರ್ಥಿನಿಯ ರಕ್ಷಣೆ:
ಸುದ್ದಿ ತಿಳಿಯುತ್ತಿದ್ದಂತೆ ರಾಮನಗರ ಟೌನ್ ಪೊಲೀಸರು ಅಪಹರಣಕಾರರ ಕಾರನ್ನು ಬೆನ್ನಟ್ಟಿ ಘಟನೆ ನಡೆದ 2 ಗಂಟೆಯೊಳಗೆ ವಿದ್ಯಾರ್ಥಿನಿಯನ್ನು ರಕ್ಷಿಸಿ ಆರೋಪಿಯ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ದುಷ್ಕರ್ಮಿಯಿಂದ ಚಾಕು ಇರಿತಕ್ಕೊಳಗಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತೆಗೆ ಪ್ರೀತ್ಸೇ…. ಪ್ರೀತ್ಸೇ… ಅಂತ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿ ಕನಕಪುರ ಮೂಲದ ಆರೋಪಿಯನ್ನು ಬಂಸಿದ್ದಾರೆ.

ಪೊಲೀಸರಿಗೆ ಪ್ರಶಂಸೆ:
ವಿದ್ಯಾರ್ಥಿನಿಯನ್ನು ಅಪಹರಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ದುಷ್ಕರ್ಮಿಗಳ ಕಾರನ್ನು ಬೆನ್ನಟ್ಟಿ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share this Article