ಗದಗ: ಸೂರ್ಯಕಾಂತಿ ಬೆಳೆ ಕಟಾವು ಮಾಡಿದ ಹೊಲದಲ್ಲಿ ಮೇಯ್ದ ನಂತರ ಸುಮಾರು 200ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿಡ್ನಾಳ ಗ್ರಾಮದಲ್ಲಿ ನಡೆದಿದೆ ಕುರಿಗಳು ವಿಷಾಹಾರ ಸೇವಿಸಿರಿಂದಲೇ ಸಾವಿಗೀಡಾಗಿವೆರುವ ಶಂಕೆ ವ್ಯಕ್ತವಾಗಿದೆ.
ಸಂಜೆ ಗೂಡಿನ ಕಡೆ ಕುರಿಗಳು ಸಾಗುವ ವೇಳೆಯಲ್ಲಿ ಒಂದರ ಬಳಿಕ ಒಂದು ಕುರಿಗಳು ಸಾವನಪ್ಪಿವೆ ಸುಮಾರು 15ಕ್ಕೂ ಹೆಚ್ಚು ರೈತರಿಗೆ ಸೇರಿದ ಕುರಿಗಳಾಗಿದ್ದು.
ಸಾವನಪ್ಪಿದ ಕುರಿಗಳ ಹೊಟ್ಟೆ ಸಂಪೂರ್ಣ ಊದಿಕೊಂಡಿದ್ದು ವಿಷ ಆಹಾರ ಸೇವನೆಯಿಂದಾಗಿಯೇ ಕುರಿ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ.
200 ಕುರಿಗಳು ಸತ್ತಿದ್ದು ಸರ್ಕಾರ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕೆಂದು ಕುರಿಗಾರರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.