ಮೋದಿಯವರನ್ನ ಕರೆಸಿ ಬೀದಿ ಬೀದಿ ಓಡಾಡ್ಸಿ ಮಾನ ಮರ್ಯಾದೆ ತೆಗೆದರು: ಸಚಿವ ದಿನೇಶ್ ಗುಂಡೂರಾವ್

graochandan1@gmail.com
1 Min Read

ಗದಗ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿನ ಇಸ್ರೋ ಭೇಟಿ ನೀಡುವ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಬಿಜೆಪಿ ಮುಖಂಡರು ಜನರ ಮಧ್ಯೆ ನಿಂತು ಕೈ ಬೀಸಿರುವ ವಿಚಾರ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಜನರ ಮಧ್ಯೆ ನಿಂತಿದ್ದ ಬಿಜೆಪಿ ನಾಯಕರನ್ನು ಮೋದಿ ಗುರುತು ಹಿಡಿಯದ ಹಾಗೆ ಹೋದ ಇನ್ನೂ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿಯವರನ್ನ ಕರೆಸಿ ಬೀದಿ ಬೀದಿ ಓಡಾಡ್ಸಿ ಮಾನ ಮರ್ಯಾದೆ ತೆಗೆದ ಎಂದು ಸಚಿವ ದಿನೇಶ್ ಗುಂಡೂರಾವ್ ವ್ಯಂಗವಾಗಿ ಮಾತನಾಡಿದರು.

ಶನಿವಾರ ನಡೆದ ರೋಡ್ ಶೋ ವೇಳೆ ಮೋದಿಯವರು ನೋಡ್ಲಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷರು ಬೀದಿಯಲ್ಲಿ ನಿಂತಿದ್ದರು ಆದರೆ ಅವರು ಇವರನ್ನು ತಿರುಗಿಯೂ ಸಹ ನೋಡ್ಲಿಲ್ಲ. ಇವರಿಗಾದರೂ  ಸ್ವಾಭಿಮಾನ ಇರ್ಬೇಕಲ್ವಾ..? ಎಂದು ವ್ಯಂಗ್ಯ ವಾಡಿದ್ದಾರೆ.

ಪ್ರಧಾನ ಮಂತ್ರಿ ಮೋದಿ ಕಾರ್ಯಕ್ರಮಕ್ಕೆ ಯಾರು ಬರಬೇಡಿ ಅಂತಾ ಅವರೆ ಹೇಳಿದ್ದ ಅದಕ್ಕೆ ಕಾಂಗ್ರೆಸ್ ಪಕ್ಷದಿಂದ ಯಾರೂ ಹೋಗಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

- Advertisement -
Ad image

Share this Article