ಗಜೇಂದ್ರಗಡ: ಸಮೀಪದ ಗೌಡಗೇರಿ ಗ್ರಾಮದ ಹತ್ತಿರದ ಗೋಡಾಮ್ ಗೆ ಆಹಾರ ಇಲಾಖೆ ಮತ್ತು ಸೈಬರ್ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ ( ಸಿ.ಇ.ಎನ್.) ತಂಡದ ೫ ಜನರ ತಂಡದಿಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಕೀ ತರಲು ಹೈ ಡ್ರಾಮಾ:
ಆಹಾರ ಇಲಾಖೆಯ ಸಿಬ್ಬಂದಿಗಳು ಹಾಗೂ ಪೋಲಿಸ್ ಇಲಾಖೆಯ ೨ ರಿಂದ ೩ ತಾಸುಗಳ ಕಾಲ ಕಾದರು ಕೀ ತರಲು ಸಾಧ್ಯವಾಗಲಿಲ್ಲ. ಯಾವುದೋ ಅಂಗಡಿಯ ಬಿಲ್ ತೆಗೆದುಕೊಂಡು ಅಂಗಡಿಯಲ್ಲಿ ಕೆಲಸ ಮಾಡುವ ಮುತ್ತಣ್ಣ ಯರಗೇರಿ ಎನ್ನುವವನ ಕೈ ಯಲ್ಲಿ ಬಿಲ್ ಕಳಿಸಲಾಗಿತ್ತು.
ಗೋಡಾಮಿನ ಬೀಗ್ ತರದೆ ಇದ್ದ ಹಿನ್ನಲೆಯಲ್ಲಿ ಗೋಡಾಮಿನ ಬೀಗವನ್ನು ಒಡೆದ ಹಾಕಿದ ಪೋಲಿಸ್ ಇಲಾಖೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು.
ಬಳಿಕ ಆಹಾರ ನಿರೀಕ್ಷಕ ಮಂಜುನಾಥ ತಳ್ಳಿಹಾಳ ಮಾಧ್ಯಮದ ಜೊತೆ ಮಾತನಾಡಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಅಕ್ರಮ ಅನ್ನಭಾಗ್ಯ ಸಾಗಾಟದ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿರುವ ಹಿನ್ನಲೆಯಲ್ಲಿ ದಾಳಿಯನ್ನು ಮಾಡುಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬಿಲ್ ಗಳು ಇವೆ ಎನ್ನುವಂತೆ ಕಾಣುತ್ತದೆ. ಮೇಲ್ನೋಟಕ್ಕೆ ಇವು ಸರ್ಕಾರದ ಅನ್ನ ಭಾಗ್ಯ ಯೋಜನೆಯ ಅಕ್ಕಿಯ ಹಾಗೇ ಇದ್ದು. ಈ ಕುರಿತಂತೆ ಮಾಹಿತಿ ಕಲೆ ಹಾಕುತ್ತಿದ್ದೇನೆ ಎಂದರು.
ಈ ಸಂಧರ್ಬದಲ್ಲಿ ಸಿ.ಇ.ಎನ್. ಪೋಲಿಸ್ ಠಾಣೆಯ ಪಿ.ಎಸ್.ಐ. ಲಕ್ಷ್ಮಣ ಗೌಡಿ ಮತ್ತು ಅವರ ೫ ಜನರ ತಂಡ ಹಾಗೂ ಗಜೇಂದ್ರಗಡ ಪೋಲಿಸ್ ಠಾಣೆಯ ಪಿ.ಎಸ್.ಐ. ಸೋಮನಗೌಡ ಗೌಡರ, ಸೇರಿದಂತೆ ಅನೇಕರು ಇದ್ದರು.