ಬೆಂಗಳೂರು: ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಇಲಾಖೆ ತಿದ್ದುಪಡಿಗೆ ಮತ್ತೆ ಅವಕಾಶ ನೀಡಿದೆ. ಸೆ.1ರಿಂದ 10ರವರೆಗೆ ಮತ್ತೆ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು, ಬೆಳಗ್ಗೆ 10ರಿಂದ 6 ಗಂಟೆಯವರೆಗೆ ತಿದ್ದುಪಡಿಗೆ ಸಮಯ ನೀಡಲಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಫಲಾನುಭವಿಗಳು ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ. ಕಳೆದ ವಾರ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಆದರೆ ಸರ್ವರ್ ಡೌನ್ (Server Down) ಆಗಿರುವ ಕಾರಣ ತಿದ್ದುಪಡಿಗೆ ಮಾಡಲು ಆಗಿರಲಿಲ್ಲ. ಇದೀಗ ನಾಳೆವರೆಗೆ ಮಧ್ಯಾಹ್ನ 12 ರಿಂದ ಸಂಜೆ 5ರ ವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಏನನ್ನು ತಿದ್ದುಪಡಿ ಮಾಡಬಹುದು..?
1.ಫಲಾನುಭವಿ ಹೆಸರು ಬದಲಾವಣೆ
2.ಪಡಿತರ ಕೇಂದ್ರ ಬದಲಾವಣೆ
3.ಕಾರ್ಡ್ ಸದಸ್ಯರ ಹೆಸರು ಡಿಲಿಟ್, ಸೇರ್ಪಡೆ
4.ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ
5.ಮಹಿಳಾ ಮುಖ್ಯಸ್ಥರ ಹೆಸರು ಬದಲಾವಣೆ.