ಚಂದ್ರಯಾನ-3 ಯಶಸ್ಸಿನ ಹಿಂದೆ ಗದಗ ಜಿಲ್ಲೆಯ ಸುಧೀಂದ್ರ ಬಿಂದಗಿ ವಿಜ್ಞಾನಿ

ಸಮಗ್ರ ಪ್ರಭ ಸುದ್ದಿ
2 Min Read

ಗದಗ: ಇಡೀ ಲೋಕವೆ ನಮ್ಮ ಭಾರತದತ್ತ ಚಿತ್ತ ಹರಿಸಿದೆ ಭಾರತದ ಚಂದ್ರಯಾನ-3 ಬುಧವಾರ ಯಶಸ್ಸಿಯಾದ ಬೆನ್ನಲ್ಲೇ ದೇಶ ವಿದೇಶಗಳಲ್ಲಿ ಭಾರತ ಬಾಹ್ಯಾಕಾಶ ಈ ಸಾಧನೆ ಕುರಿತು ಹೆಮ್ಮೆಯ ವ್ಯಕ್ತವಾಗಿದೆ.

ಈ ಸಾಧನೆಯ ಹಿಂದೆ ಗದಗ ಜಿಲ್ಲೆಯ ವಿಜ್ಞಾನಿ ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಸುಧೀಂದ್ರ ಬಿಂದಗಿ ಅವರ ಕಾರ್ಯ ಸಾಧನೆ ಅಪಾರವಾಗಿದೆ.

ಸುಧೀಂದ್ರ ವೆಂಕಣ್ಣಾಚಾರ್ಯ ಬಿಂದಗಿಯವರು ಮೂಲತಃ ಗದುಗಿನ ವೀರನಾರಾಯಣ ದೇವಸ್ಥಾನದ ಅಗ್ರಹಾರದವರಾಗಿದ್ದು ಸೊರಟೂರ ಗ್ರಾಮದ ಶ್ರೀನಿವಾಸಾಚಾರ್ಯ ಹಾಗೂ ಸೊರಟೂರ ಭೀಮಸೇನಾಚಾರ್ಯರು ಮನೆತನಕ್ಕೆ ಸೇರಿದವರಾಗಿದ್ದಾರೆ.

ಗದಗ ನಗರದ ವಿಡಿಎಸ್ಟಿ ಶಾಲೆಯಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣ ಪಡೆದುಕೊಂಡು ಬಿ.ಟೆಕ್ ಪದವಿ ಮುಗಿಸಿ ವಿವಿಧೆಡೆ ಸೇವೆ ಸಲ್ಲಿಸಿ 1986 ರಲ್ಲಿ ಇಸ್ರೋ ಸಂಸ್ಥೆಯ ಉಪಗ್ರಹ ಕೇಂದ್ರದ ವಿಜ್ಞಾನಯಾಗಿ ಇಸ್ರೋದಲ್ಲಿ ತಮ್ಮ ಸೇವೆ ಆರಂಭಿಸಿದರು.

ಇಸ್ರೋದಲ್ಲಿ ಸಮೂಹದಲ್ಲಿ ನಿರ್ದೇಶಕರಾಗಿ ಸುಮಾರು 100 ವಿಜ್ಞಾನಿಗಳ ತಂಡ 20 ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗತೆಯನ್ನು ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ ಅವರು ಅನೇಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಗಗನಯಾನಕ್ಕೆ ಬೇಕಾಗುವ ತಂತ್ರಜ್ಞಾನಗಳು ಅನೇಕ ರಾಸಾಯನಿಕ ಲೇಪನಗಳು ಸಾಫ್ಟವೇರ ಅಭಿವೃದ್ಧಿ ಹಾಗೂ ಸ್ವದೇಶಿಕರಣದ ಅಂಗವಾಗಿ ವಿಶೇಷ ಹಿಟರ್‍ಗಳು ತಾಪಮಾನದ ಮಾಪಕಗಳ ಇವರ ನಿರ್ದೇಶನದಲ್ಲಿ ಅಭಿವೃದ್ಧಿಗೊಂಡಿವೆ. ಸುಮಾರು 70 ಮೂಲಭೂತ ತಂತ್ರಜ್ಞಾನದ ಆವಿಷ್ಕಾರಗಳು ಇವರ ನೇತೃತ್ವದಲ್ಲಿ ನಡೆದಿವೆ.

ತಮ್ಮ ಕ್ಷೇತ್ರದಲ್ಲಿ ಅಪಾರ ಪರಿಣಿತಿಯನ್ನು ಪಡೆದ ಇವರು ರಾಷ್ಟ್ರೀಯ ಹಾಗೂ ಅಂತರ್‍ರಾಷ್ಟ್ರೀಯ ಪ್ರಸಿದ್ಧಿ ಪಡೆದ ಜರ್ನಲ್‍ಗಳಲ್ಲಿ ಹಾಗೂ ವಿಚಾರ ಸಂಕೀರ್ಣಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಬಂಧಗಳು ಪ್ರಕಟಗೊಂಡಿವೆ. ಇದಲ್ಲದೆ 5 ತಂತ್ರಜ್ಞಾನದ ಪೆಟೆಂಟ್‍ಗಳು ಇವರ ನೇತೃತ್ವದಲ್ಲಿ ಸಲ್ಲಿಕೆಯಾಗಿವೆ.

ದಿನಾಂಕ 23/08/2023 ರಂದು ಸಾಯಂಕಾಲ 4 ರಿಂದ 6 ಗಂಟೆಯವರೆಗೆ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಕಾರ್ಯಾಚರಣೆಯಲ್ಲಿ ಗದುಗಿನ ಬಾಹ್ಯಾಕಾಶ ವಿಜ್ಞಾನಿಯಾದ ಸುಧೀಂಧ್ರ ಬಿಂದಗಿಯವರ ಪಾತ್ರ ಪ್ರಮುಖವಾಗಿದೆ. ಅವರು ಸಹ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದು ನಮ್ಮ ಗದುಗಿಗೆ ಹೆಮ್ಮೆಯ ವಿಷಯವಾಗಿದೆ.

ಇಸ್ರೋ ಇತಿಹಾಸದಲ್ಲಿ ಮೈಲುಗಲ್ಲು ವಿಕ್ರಂ ಲ್ಯಾಂಡರ್ ಯಶಸ್ವಿ ಲ್ಯಾಂಡಿಂಗ್ ಚಂದ್ರಯಾನ್-3 ಯಶಸ್ವಿ ಲ್ಯಾಂಡಿಂಗ್ ಇಸ್ರೋ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರು
ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಐತಿಹಾಸಿಕ ಸಾಧನೆ ಜಗತ್ತಿಗೆ ಪ್ರಥಮ ಸಾಧನೆಗೈದ ಭಾರತದ ವಿಜ್ಞಾನಿಗಳನ್ನು ಹಾಗೂ ತಂತ್ರಜ್ಞಾನಿಗಳನ್ನು ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ. ಆ ವಿಜ್ಞಾನಿಗಳಲ್ಲಿ ನಮ್ಮ ಗದುಗಿನ ಬಾಹ್ಯಾಕಾಶ ವಿಜ್ಞಾನ ಸುಧೀಂದ್ರ ಬಿಂದಗಿಯವರು ಒಬ್ಬರು ಎನ್ನುವುದು ನಮ್ಮ ಗದುಗೆಗೆ ಹೆಮ್ಮೆಯ ವಿಷಯವಾಗಿದೆ ಇವರಿಗೆ ಗದುಗಿನ ಜಿಲ್ಲೆಯ ಜನತೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ.

Share this Article