ಭಾರತದ UPI ದೈನಂದಿನ ವಹಿವಾಟು 36 ಕೋಟಿ ರೂ. ದಾಟಿದೆ: ಆರ್‌ಬಿಐ

ಸಮಗ್ರ ಪ್ರಭ ಸುದ್ದಿ
1 Min Read

ಮುಂಬೈ: ದೇಶದಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್(ಯುಪಿಐ) ಪಾವತಿಗಳು ಕಳೆದ ಒಂದು ವರ್ಷದಿಂದ ತೀವ್ರವಾಗಿ ಹೆಚ್ಚುತ್ತಿದ್ದು, ಮಾರ್ಚ್‌ನಲ್ಲಿ ಯುಪಿಐ ದೈನಂದಿನ ವಹಿವಾಟು 36 ಕೋಟಿ ರೂಪಾಯಿ ದಾಟಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ಗವರ್ನರ್ ಶಕ್ತಿಕಾಂತ್ ದಾಸ್ ಸೋಮವಾರ ಹೇಳಿದ್ದಾರೆ.

ಫೆಬ್ರವರಿ 2022 ರಲ್ಲಿ ಯುಪಿಎ ದೈನಂದಿನ ವಹಿವಾಟು ಗರಿಷ್ಠಿ 24 ಕೋಟಿ ರೂಪಾಯಿ ಆಗಿತ್ತು. ಹಿಂದಿನ ವಹಿವಾಟುಗಳಿಗೆ ಹೋಲಿಸಿದರೆ ಮಾರ್ಚ್ ನಲ್ಲಿ ಶೇ. 50 ರಷ್ಟು ಏರಿಕೆಯಾಗಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಆರ್‌ಬಿಐ ಪ್ರಧಾನ ಕಛೇರಿಯಲ್ಲಿ ಡಿಜಿಟಲ್ ಪಾವತಿ ಜಾಗೃತಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಶಕ್ತಿಕಾಂತ್ ದಾಸ್ ಅವರು, ಮೌಲ್ಯದ ಪ್ರಕಾರ, ಈ ವರ್ಷದ ಫೆಬ್ರವರಿಯಲ್ಲಿ ಯುಪಿಐ ಮೂಲಕ 6.27 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದು ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.17 ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಒಟ್ಟಾರೆ ಮಾಸಿಕ ಡಿಜಿಟಲ್ ಪಾವತಿ ವಹಿವಾಟು ಪ್ರತಿ ತಿಂಗಳು 1,000 ಕೋಟಿ ರೂಪಾಯಿ ದಾಟಿದೆ ಎಂದು ಅವರು ತಿಳಿಸಿದ್ದಾರೆ.

Share this Article