ಗದಗ:ಕಾಲುವೆಯಲ್ಲಿ ನೀರು ಕುಡಿಯಲು ತೆರಳಿದ್ದ ಬಾಲಕ ಅಚಾನಕ್ಕಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಾರೊಗೇರಿ ಗ್ರಾಮದ ಬಳಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ನಡೆದಿದೆ.ಕಾಲುವೆಗೆ ಬಿದ್ದು ಸಾವನ್ನಪ್ಪಿದ ಮೃತ ಬಾಲಕನನ್ನು ಅಭಿಷೇಕ ಮೈಲೆಪ್ಪ ಮಾದರ (೧೪) ಎಂದು ಗುರುತಿಸಲಾಗಿದೆ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.