ಗದಗ: ಉತ್ತರ ಕರ್ನಾಟಕ ಭಾಗದ ರೈತರ ಬದುಕಿನ ಕಥೆಯನ್ನು ತೆರೆಮೇಲೆ ತರುವ ಅದ್ಭುತವಾದ ನೈಜ ಘಟನೆ ಆಧಾರಿತ ನೂತನ ಚಲನಚಿತ್ರವನ್ನು ಎಲ್ಲರೂ ಅದರಲ್ಲೂ ವಿಶೇಷವಾಗಿ ರೈತರು ಮತ್ತು ರೈತ ಮಕ್ಕಳು ನೋಡಬೇಕು ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವಸಂತ ಪಡಗದ ಕ್ಷೇತ್ರಪತಿ ಚಲನ ಚಿತ್ರ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕ ಭಾಗದ ಕಥೆಯನ್ನು ಹೊತ್ತ ಸಿನಿಮಾ ಇದಾಗಿದೆ ನಮ್ಮ ಭಾಗದವರೆ ಆದೆ ಶ್ರೀಕಾಂತ್ ಕಟಗಿ ನಿರ್ದೇಶಿಸಿದ ಸಿನೆಮಾ ಇದಾಗಿದ್ದು ಕನ್ನಡ ಚಿತ್ರರಂಗದಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳು ಬೆಳೆದು ಇಂತಹ ನೈಜ ಘಟನೆ ಆಧಾರಿತ ಚಲನಚಿತ್ರ ಮಾಡಬೇಕಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದ ರೈತರ ಮಕ್ಕಳಿಂದ ನಿರ್ಮಾಣಗೊಂಡ ಕ್ಷೇತ್ರಪತಿ ಚಲನಚಿತ್ರವು
ಅನ್ನದಾತನ ಸಮಸ್ಯೆಗಳು, ಹೋರಾಟದ ಬದುಕು ಸೇರಿದಂತೆ ವಿಶೇಷವಾಗಿ ಆತ್ಮಹತ್ಯೆ ಮಾಡಿಕೊಂಡ ರೈತನ ಮಗನಾಗಿ ಸರ್ಕಾರದ ವಿರುದ್ಧ ರೊಚ್ಚಿಗೇಳೋ ಯುವಕನ ಪಾತ್ರದಲ್ಲಿ ನವೀನ್ ಶಂಕರ್ ಕಾಣಿಸಿಕೊಂಡು ರೈತ ಶಕ್ತಿಯನ್ನು ಅನಾವರಣಗೊಳಿಸಿ ಬಹು ವರ್ಷಗಳ ನಂತರ ಸಿನಿಮಾ ಪರದೆ ಮೇಲೆ ಅನ್ನದಾತರ ಸಮಸ್ಯೆ ಬೆಳಕಿಗೆ ಚೆಲ್ಲಿ ಜಗತ್ತಿಗೆ ತೋರಿಸುವಲ್ಲಿ ನಿರ್ದೇಶಕ ಶ್ರೀಕಾಂತ ಕಟಗಿ ಯಶಸ್ವಿಯಾಗಿದ್ದಾರೆ.
– ವಿಜಯ ಕುಲಕರ್ಣಿ,
ಅಧ್ಯಕ್ಷರು ಕಳಸಾ-ಬಂಡೂರಿ ಹೋರಾಟ ಸಮಿತಿ
ಈ ಸಂಧರ್ಭದಲ್ಲಿ ಆನಂದ ಗವಳಿ,ಪ್ರಭು ಕರಮುಡಿ,ವಿಶಾಲ ಮುಂಡರಗಿ, ಶಣ್ಮುಕ ಹರಿಜನ,ಮಂಜು ಪೂಜಾರಿ ಹಲವಾರು ಉಪಸ್ಥಿತಿತರಿದ್ದರು.