ಬಸ್ ಚಲಿಸುತ್ತಿರುವಾಗಲೇ ಕಳಚಿ ಬಿದ್ದ ಹಿಂಬದಿಯ ಚಕ್ರ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಸಾರಿಗೆ ಸಂಸ್ಥೆಯ ಬಸ್ ಚಲಿಸುತ್ತಿರೋವಾಗಲೇ ಬಸ್ ನ ಹಿಂಬದಿ ಚಕ್ರ ಬಿಚ್ಚಿಕೊಂಡು ರಸ್ತೆಗೆ ಉರುಳಿದ ಘಟನೆ ನಗರದ ಹೊಂಬಳ ರಸ್ತೆಯ ತಗಡುರಿನಲ್ಲಿ ನಡೆದಿದೆ.

ಇಂದು ಮುಂಜಾನೆ ಗದಗ ತಾಲೂಕಿನ ತಗಡೂರು ಗ್ರಾಮದ ಬಳಿ ಗದಗದಿಂದ ನರಗುಂದದ ಕಡೆ ಹೊರಟಿದ್ದ ಗದಗ ಡಿಪೋಗೆ ಸೇರಿದ ವಾಯವ್ಯ ಕರ್ನಾಟಕ ಸಾರಿಗೆ ನಿಮಗದ ಬಸ್ ಚಲಿಸುವಾಗ ಬಲಭಾಗದ ಹಿಂಬದಿಯ ಬಸ್ ನ ಟೈಯರ ಕಳುಚಿ ರಸ್ತೆಗೆ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಸುಮಾರು 50 ಜನ ಪ್ರಯಾಣಿಕರನ್ನ ಕರೆದೊಯ್ಯುತ್ತಿದ್ದ ಬಸ್ ಬಸ್ ಹಿಂಬದಿ ಚಕ್ರ ಬಿಚ್ಚಿ ಉರುಳಿ ಹೋಗುತಿದ್ದಂತೆ ಬಸ್ ನಿಲ್ಲಿಸಿದ ಚಾಲಕ ಬಸ್ ನ ಹಿಂದೆ ಹೋಗುತಿದ್ದ ಕಾರೊಂದರಲ್ಲಿನ ಜನ ಮೊಬೈಲ್‌ ನಲ್ಲಿ ಈ ದೃಶ್ಯವನ್ನು ಸೇರೆ ಹಿಡಿದ್ದಿದ್ದಾರೆ.

Share this Article