ಗದಗ: ಜಿಲ್ಲಾಧ್ಯಂತ ಮಣ್ಣು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು ಅದರಲ್ಲಿ ಗದಗ ತಾಲೂಕಿನ ಕಳಸಾಪೂರ,ನಾಗಾವಿ ಸೇರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರ ಹೊಲದಲ್ಲಿ ದಂದೆಕೋರರ ಮೂಲಕ ದೊಡ್ಡ ದೊಡ್ಡ ಜೆಸಿಬಿ,ಹಿಟ್ಯಾಚಿ ಯಂತ್ರಗಳ ಮೂಲಕ ಮಣ್ಣನ್ನು ಅಗೆದು ಟಿಪ್ಪರಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ.
ಈ ಕುರಿತು ಜಿಲ್ಲೆಯ ಕಂದಾಯ ಅಧಿಕಾರಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಅಕ್ರಮ ಮಣ್ಣು ಗಣಿಗಾರಿಕೆ ಮಾಡುತ್ತಿರುವವರ ಕುರಿತು ಕ್ರಮಕ್ಕೆ ಮುಂದಾಗುತಿಲ್ಲ ಎನ್ನುವುದೇ ಒಂದು ದೊಡ್ಡ ವಿಪರ್ಯಾಸದ ಸಂಗತಿ.
ಕಳೆದ ವರ್ಷ ತಾಲೂಕಿನ ಕಳಸಾಪುರ,ಚಿಕ್ಕಹಂದಿಗೋಳ ಗ್ರಾಮದಲ್ಲಿ ಹೊಂಡಕ್ಕೆ ಬಿದ್ದು ಮಕ್ಕಳು ಸಾವನ್ನಪ್ಪಿದರು ಅಂದಿನ ಜಿಲ್ಲಾಧಿಕಾರಿ ಸುಂದರೇಶ ಬಾಬು ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಅಕ್ರಮ ಮಣ್ಣು ಗಣಿಗಾರಿಕೆ ತಡೆಗೆ ಆದೇಶ ನೀಡಿದ್ದರು ಜೊತೆಗೆ ಹೊಂಡದ ಸುತ್ತಲೂ ತಂತಿ ಬೇಲಿ ಹಾಕಿ ಅಪಾಯದ ಸ್ಥಳ ಎಂದು ನಾಮಫಲಕ ಅಳವಡಿಸಲು ಸೂಚಿಸಿದ್ದರು ಆದರೆ ಇಂದು ಆ ಆದೇಶವನ್ನು ಕ್ಯಾರೆ ಅನ್ನದೇ ಅಧಿಕಾರಿಗಳು ಹಾಗೂ ದಂದೆಕೋರರು ಮನಸ್ಸೋ ಇಚ್ಛೆಯಂತೆ ಬೇಕಾಬಿಟ್ಟಿ ಭೂಮಿ ಅಗೆದು ಅದನ್ನು ಮುಚ್ಚದೆ ಸಾವಿನ ಹೊಂಡಗಳಾಗಿ ಪರಿವರ್ತನೆಯಾಗುತ್ತಿವೆ.
ಅನುಮತಿ ಹೇಗೆ ತೆಗೆದುಕೊಳ್ಳುತ್ತಾರೆ..?
ರೈತರಿಂದ ದಂದೆಕೊರರು ಕೃಷಿ ಭೂಮಿಯನ್ನು ಸಮದಟ್ಟು ಮಾಡಲು ಅಲ್ಲಿರುವ ಮಣ್ಣನ್ನು ತೆಗೆಯಲು ಅನುಮತಿಯನ್ನು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಬಳಿ ಕೆಲ ಮಾನದಂಡಗಳ ಅನ್ವಯ ಅನುಮತಿ ತೆಗೆದುಕೊಂಡು ಮಾನ ದಂಡಗಳನ್ನು ಮೀರಿ ಅಕ್ರಮ ಮಣ್ಣು ಗಣಿಗಾರಿಕೆ ಆರಂಭ ಮಾಡುತ್ತಾರೆ.
ಎಲ್ಲಿಗೆ ಸಾಗಾಟ..!
ರೈತರ ಜಮೀನಿಂದ ತೆಗೆದ ಮಣ್ಣನ್ನು ಗದಗ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ರಸ್ತೆ ನಿರ್ಮಾಣಕ್ಕೆ,ಖಾಸಗಿ ಲೇಜೌಟಗಳ ರಸ್ತೆ ಅಭಿವೃದ್ಧಿಗೆ ಟಿಪ್ಪರಗೆ ಒಂದಿಷ್ಟು ಹಣವನ್ನು ಪಿಕ್ಸ ಮಾಡಿ ಅಲ್ಲಿರುವ ಮಣ್ಣನ್ನು ಮಾರಾಟ ಮಾಡುತ್ತಾರೆ.
ಕೂಡಲೇ ಜಿಲ್ಲಾಧಿಕಾರಿಗಳು ಅಕ್ರಮ ಮಣ್ಣು ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಮತ್ತು ಈ ವರೆಗೆ ನಡೆದ ಅಕ್ರಮ ಗಣಿಗಾರಿಕೆಗಳ ತನಿಖೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗದಗ ನಗರದ ರೆಹಮತ ಕಾಲೋನಿಯಲ್ಲಿ ಮಂಗಳವಾರ ಇಬ್ಬರ ಬಾಲಕರ ಸಾವು:
ಇಂತಹ ಹೊಂಡದಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಜಾನುವಾರಿಗೆ ಸ್ನಾನ ಮಾಡಿಸಲು ಹೊದಾಗ ಹೊಂಡದಲ್ಲಿ ಬಿದ್ದು ಗದಗ ನಗರದ ರೆಹಮತ್ ಕಾಲೋನಿಯ ಇಬ್ಬರ ಮಕ್ಕಳು ನೀರು ಪಾಲಾಗಿದ್ದಾರೆ.
ಸಚಿವ ಎಚ್ಕೆ ಪಾಟೀಲ ಸಾಂತ್ವಾನ :
ಸುದ್ದಿ ತಿಳಿಯುತ್ತಿದಂತೆ ಸಚಿವ ಎಚ್ ಕೆ ಪಾಟೀಲ ರೆಹಮತ್ ನಗರದ ನೀರು ಪಾಲಾದ ಇಬ್ಬರೂ ಮಕ್ಕಳ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ದೈರ್ಯ,ಸಾಂತ್ವಾನ ಹೇಳಿದ್ದಾರೆ.