ವಿಸ್ ಆನಿಕಾ ಕಳುಹಿಸಿದ ಜಾಬ್ ಆಫರ್ ನಂಬಿ 39 ಲಕ್ಷ ಹಣ ಕಳೆದುಕೊಂಡ ನಗರದ ಇಂಜಿನಿಯರ್

graochandan1@gmail.com
1 Min Read

ಗದಗ: ಸೈಬರ್ ಕ್ರೈಮ್ ನಲ್ಲಿ ಮೋಸ ಹೋಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಈದರ ಮಧ್ಯೆ ಪಾರ್ಟ ಟೈಂ ಕೆಲಸ ನಂಬಿದ ಇಂಜನೀಯರ ಒಬ್ಬ ಬರೋಬ್ಬರಿ 39 ಲಕ್ಷ 15 ಸಾವಿರ ರೂ ಕಳೆದುಕೊಂಡು ಮೋಸ ಹೋಗಿದ್ದಾನೆ.

ಗದಗ ಶಹರದ ಹುಡ್ಕೋ ಕಾಲೋನಿ ನಿವಾಸಿಯಾದ ಸಂದೀಪ ತಂದೆ ರಂಗನಗೌಡ ಪಾಟೀಲ ಎಂಬ ಇಂಜಿನಿಯರ್ ಗೆ ಆಗಸ್ಟ್ 4 ರಿಂದ 8 ರವರೆಗೆ ಅವರ ಮೊಬೈಲ್ ನಂಬರಗೆ 9593989404 ಈ ನಂಬರ್‌ನಿಂದ ಮಿಸ್ ಆನಿಕಾ ಎಂಬುವರು ವಾಟ್ಸ್‌ಅಪ್‌ನಲ್ಲಿ ಪಾರ್ಟ್‌ಟೈಮ್ ಜಾಬ್ ಆಫರ್‌ನ ಮೆಸೇಜ್ ಕಳುಹಿಸಿದ್ದಾರೆ.

ಮಿಸ್ ಆನಿಕಾ ಎಂಬವರು ಕಳುಹಿಸಿದ ಪಾರ್ಟ್‌ಟೈಮ್ ಜಾಬ್ ಆಫರ್‌ನ ಮೆಸೇಜ್ ನಂಬಿದ ಇಂಜನಿಯರಗೆ ವಿವಿಧ ಟಾಸ್ಕಗಳನ್ನು ನೀಡಿದ ಮಿಸ್ ಆನಿಕಾ, ಲಿಯಾ @Lia9913, ಕಿರಣರಾವ್@KiranRao01231311 ನತಾಶಾ@NT13454 ಮತ್ತು ಕಿಶೋರ್ @Kishore55031 ಎಂಬುವರಿಂದ ಟಾಸ್ಕ ನೀಡಿ 20ಲಕ್ಷ, 24ಸಾವಿರದ, 800ರೂ.ಗಳನ್ನು ಅಕೌಂಟ್‌ನಲ್ಲಿ ಹಾಕಿ ಇಂಜಿನಿಯರ ಗೆ ಪಾರ್ಟ್ ಟೈಂ ಜಾಬ್ ಹೆಚ್ಚಿನ ಆಸೆ ಹುಟ್ಟಿಸಿದ್ದಾರೆ.

- Advertisement -
Ad image

ನಂತರ ಆ ಹಣ ವಿತ್‌ಡ್ರಾ ಮಾಡಲು ಹೋದಾಗ ಅಕೌಂಟ್ ಪ್ರೀಜ್ ಮಾಡಿದ್ದಾರೆ ಅಕೌಂಟ್ ಅನ್ಪ್ರೀಜ್ ಮಾಡಲು ಹಂತ-ಹಂತವಾಗಿ ಇಂಜಿನೀಯರ ಹತ್ತಿರ 39 ಲಕ್ಷ, 15 ಸಾವಿರಗಳನ್ನು ಹಾಕಿಸಿಕೊಂಡು ಇನ್ನೂ ಐದು ಲಕ್ಷ ಹಾಕಬೇಕು ಎಂದು ಮೆಸೇಜ್ ಕಳುಹಿಸಿ ಮೋಸ ಮಾಡಿದ್ದಾರೆ ಮಿಸ್ ಆನಿಕಾ ಮೆಸೆಜ ನಿಂದ ಮೋಸವಾಗಿದೆ ಎಂದು ತಿಳಿದು ತಕ್ಷಣ
ಇಂಜಿನಿಯರ್ ಸಂದೀಪ್ ಟ ಪಾಟೀಲ ಗದಗ ಸಿಇಎನ್ ಠಾಣೆಗೆ ದೂರು ನೀಡಿದ್ದು, 0061/2023 INFORMATION TECHNOLOGY ACT ೨೦೦೮(U/s-66(D))ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Share this Article