ಗದಗ: ತಾಲೂಕಿನಲ್ಲಿ ಆ.15ರಂದು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ ಮಕ್ಕಳಿಗೆ 13 ಶಿಶುಪಾಲನ ಕೇಂದ್ರಗಳು ಕಾರ್ಯಾರಂಭಗೊಳ್ಳಲಿವೆ ಎಂದು ಜಿ.ಪಂ ಉಪ ಕಾರ್ಯದರ್ಶೀಗಳಾದ ಸಿ.ಆರ್. ಮುಂಡರಗಿ ಹೇಳಿದರು ಗ್ರಾಮೀಣ ಮಹಿಳೆಯರ ಮಕ್ಕಳ ಪಾಲನೆ ಮತ್ತು ಪೋಷಣೆಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರಕಾರ ಕೂಸಿನ ಮನೆ (ಶಿಶುಪಾಲನಾ ಕೇಂದ್ರ) ಆರಂಭಿಸುತ್ತಿದ್ದು, ಅದಕ್ಕಾಗಿ ಗದಗ ತಾಲೂಕಿನಲ್ಲಿ ಯೋಜನೆ ಸಾಕಾರಕ್ಕೆ ಸಕಲ ಸಿದ್ಧತೆ ನಡೆದಿದ್ದು, ಪ್ರಸ್ತುತ 13 ಗ್ರಾಮ ಪಂಚಾಯತಿಗಳಲ್ಲಿ 13 ‘ಕೂಸಿನ ಮನೆ’ಗಳು ಚಾಲನೆಗೆ ಸಜ್ಜಾಗಿ ನಿಂತಿವೆ.
ಗ್ರಾಮ ಮಟ್ಟದಲ್ಲಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ರಾಜ್ಯದಲ್ಲಿ ಗ್ರಾಪಂಗಳಲ್ಲಿ ಶಿಶುಪಾಲನಾ ಕೇಂದ್ರಗಳ ಸ್ಥಾಪನೆಗೆ ಸರಕಾರ ಸನ್ನದ್ಧವಾಗಿದೆ. ಗ್ರಾಮೀಣ ಮಹಿಳೆಯರ ಮಕ್ಕಳ ಪಾಲನ ‘ಕೂಸಿನ ಮನೆ’ ಸ್ಥಾಪನೆಯ ಉದ್ದೇಶ. ನರೇಗಾ ಅಡಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಕೂಲಿ ಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಇತರ ಕೆಲಸಗಳಲ್ಲಿ ತೊಡಗಿರುವ ತಾಯಂದಿರ 6 ತಿಂಗಳಿಂದ 3 ವರ್ಷದ ಶಿಶುಗಳನ್ನು ವ್ಯವಸ್ಥಿತವಾಗಿ ಪೋಷಣೆ ಮಾಡುವ ಉದ್ದೇಶದಿಂದ ‘ಕೂಸಿನ ಮನೆ’ ಯೋಜನೆ ಜಾರಿಗೆ ತರಲಾಗಿದೆ.
13 ಕೂಸಿನ ಮನೆ:
ಆ.15ರಂದು ಗದಗ ತಾಲೂಕಿನ 27 ಗ್ರಾಪಂಗಳ ಪೈಕಿ ಆಯ್ದ 13 ಗ್ರಾಪಂಗಳಲ್ಲಿ ನರೇಗಾ ಯೋಜನೆ ಮತ್ತು ಇತರ ಯೋಜನೆಗಳ ಒಗ್ಗೂಡಿಸುವಿಕೆ ಮೂಲಕ ಗ್ರಾಪಂ ಕಾಲ ಪ್ರತಿ ದಿನ 6ರಿಂದ 8 ತಾಸು ಕೇಂದ್ರಗಳು ಮಟ್ಟದಲ್ಲಿ ‘ಕೂಸಿನ ಮನೆ’ ಕಾರ್ಯನಿರ್ವಹಿಸಲಿವೆ. ಮಕ್ಕಳ ಪಾಲನೆಗಾಗಿ ಕಾರ್ಯಾರಂಭಗೊಳ್ಳಲಿವೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉದ್ಘಾಟನಾ ಹೊಸ್ತಿಲಲ್ಲಿ ಇರುವ ಶಿಶುಪಾಲನ ಕೇಂದ್ರಗಳನ್ನು ಪರಿಶೀಲಿಸಿ ಮಾತನಾಡಿದ ಗದಗ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಡಾ. ಎಚ್.ಎಸ್. ಜನಗಿ ಅವರು ರಾಜ್ಯ ಸರ್ಕಾರವು ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಎಂಬ ಮಹತ್ವದ ಯೋಜನೆ ತಂದಿದ್ದು ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಪ್ರತಿಯೊಬ್ಬ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ.
ಕೇಂದ್ರದಲ್ಲಿ ಏನೇನಿದೆ?
ಶಿಶುಪಾಲನಾ ಕೇಂದ್ರಗಳಲ್ಲಿ ಮೊದಲು ಸುಸಜ್ಜಿತ ಕಟ್ಟಡ, ನೀರು, ಗಾಳಿ ಬೆಳಕು, ಶೌಚಾಲಯ ವ್ಯವಸ್ಥೆ ಇರಬೇಕು. ಜತೆಗೆ ಮಕ್ಕಳಿಗೆ ಆಟದ ಸಾಮಗ್ರಿಗಳು, ಕಲಿಕಾ ಸಾಮಗ್ರಿಗಳನ್ನು ಕೇಂದ್ರ ಒಳಗೊಂಡಿರಲಿದೆ ಎನ್ನುತ್ತಾರೆ ಅಧಿಕಾರಿಗಳು.