ಜಿಲ್ಲಾ ಖೇಲೋ ಇಂಡಿಯಾ ಕೇಂದ್ರಕ್ಕೆ ತರಬೇತಿ ನೀಡಲು ಅರ್ಜಿ ಆಹ್ವಾನ

ಸಮಗ್ರ ಪ್ರಭ ಸುದ್ದಿ
1 Min Read

ಗದಗ : 2023-24 ನೇ ಸಾಲಿನಲ್ಲಿ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗದಲ್ಲಿ ಖೇಲೋ ಇಂಡಿಯಾ ಸೈಕ್ಲಿಂಗ್ ಕೇಂದ್ರ ತೆರೆಯಲು ಆಯುಕ್ತರ ಆದೇಶದಲ್ಲಿ ತಿಳಿಸಿದ್ದು, ಗದಗ ಜಿಲ್ಲಾ ಖೇಲೋ ಇಂಡಿಯಾ ಕೇಂದ್ರಕ್ಕೆ ಸೈಕ್ಲಿಂಗ್ ತರಬೇತುದಾರರಾಗಲು ಹಾಗೂ ಕ್ರೀಡಾಪಟುಗಳಿಗೆ ತರಬೇತಿದಾರರಾಗಿ ಕಾರ್ಯನಿರ್ವಹಿಸಲು ಸೈಕ್ಲಿಂಗ್ ಕೋಚ್ ಹುದ್ದೆಗೆ ಅಗಸ್ಟ 19 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಖೇಲೋ ಇಂಡಿಯಾ ಜಿಲ್ಲಾ ಕೇಂದ್ರಕ್ಕ್ಕೆ ಸೈಕ್ಲಿಂಗ್ ಕೋಚ್ ತರಬೇತುದಾರರ ಹುದ್ದೆಗೆ ಅವಶ್ಯಕತೆ ಇದ್ದು, ಎಲ್ಲಾ ದಾಖಲೆಗಳನ್ನು ದೃಢಿಕೃತ ನಕಲು ಪ್ರತಿ ನೀಡುವುದು ಒಂದು ವರ್ಷದ ಅವಧಿಗೆಗುತ್ತಿಗೆ ಆಧಾರದ ಮೇಲೆ ಆಯ್ಕೆ ಸಮಿತಿಯು ತರಬೇತುದಾರರನ್ನು ಆಯ್ಕೆ ಮಾಡಲಿದ್ದು, ತರಬೇತುದಾರರು ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದವರಾಗಿರಬೇಕು.

ಸೈಕ್ಲಿಂಗ್ ಕೋಚ್ ತರಬೇತುದಾರರ ಹುದ್ದೆಗೆ ಅರ್ಜಿ ಸಲ್ಲಿಸಲು ಷರತ್ತುಗಳು ಇಂತಿವೆ:
NIS ಸೈಕ್ಲಿಂಗ್ ಮಾಡಿದವರಿಗೆ ಹಾಗೂ ಗದಗ ರಹವಾಸಿಯಾಗಿರುವವರಿಗೆ ಪ್ರಥಮ ಆಧ್ಯತೆ ನೀಡಲಾಗುವುದು. ದಾಖಲೆಗಳನ್ನು ಪರಿಶೀಲಿಸಿ,ಜಿಲ್ಲಾ ಮಟ್ಟದ ಸಮಿತಿಯಿಂದ ನಡೆಸಲಾಗುವ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಯಾವುದೇ ಶಿಪಾರಸ್ಸುಗಳಿಗೆ ಅವಕಾಶವಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ಗದಗ ದೂರವಾಣಿ ಸಂಖ್ಯೆ 08372-238345 ಇಲ್ಲಿ ಭರ್ತಿ ಮಾಡಿ ಖುದ್ದಾಗಿ ಸಲ್ಲಿಸಬಹುದಾಗಿದೆ.

 

Share this Article