ಗದಗ: ಮಕ್ಕಳ ಮಧ್ಯಾಹ್ನದ ಬಿಸಿ ಊಟದಲ್ಲಿ ಹಲ್ಲಿ ಪತ್ತೆಯಾಗಿದ್ದು ಸುದ್ದಿ ತಿಳಿಯುತಿದ್ದಂದೆ ಮಕ್ಕಳ ಪಾಲಕರು ಶಾಲೆಗೆ ಬಂದಿದ್ದಾರೆ ಎಂದಿನಂತೆ ಇಂದು ಮಧ್ಯಾಹ್ನ ಬಿಸಿ ಊಟ ತಯಾರಿಸಿ ಮಕ್ಕಳಿಗೆ ನೀಡಿದರು ಜೊತೆಗೆ ಗ್ರಾಮ ಪಂಚಾಯತಿ ಸದಸ್ಯೆಯು ಮಕ್ಕಳೊಂದಿಗೆ ಊಟ ಮಾಡುತ್ತಿದ್ದ ಸಂಧರ್ಭದಲ್ಲಿ ಸದಸ್ಯೆಯ ತಟ್ಟೆಯಲ್ಲಿ ಊಟದ ಜೊತೆಗೆ ಹಲ್ಲಿ ಕಾಣಿಸಿಕೊಂಡಿದೆ ಇದರಿಂದ ಗಾಬರಿ ಗೊಂಡು ಊಟವನ್ನು ನಿಲ್ಲಿಸಿದ್ದಾರೆ.
ಗದಗ ಜಿಲ್ಲೆಯ ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು ವಿಷಯ ತಿಳಿದು ಕೂಡಲೇ ಗ್ರಾಮಕ್ಕೆ ಅಕ್ಷರದಾಸೋಹ ಅಧಿಕಾರಿಗಳು,ಬಿಇಓ,ತಾಲೂಕಾಧಿಕಾರಿಗಳು,ಗ್ರಾಮ ಪಂಚಾಯತ ಅಧ್ಯಕ್ಷರು,ಪಿಡಿಓ ಸೇರಿದಂತೆ ಆರೋಗ ಇಲಾಖೆಯ ಸಿಬ್ಬಂದಿ ಡಾಕ್ಟರ್ ಸಮೇತವಾಗಿ ಆಗಮಿಸಿ ಮಧ್ಯಾಹ್ನದಿಂದ ಸಂಜೆವರೆಗೂ ಮಕ್ಕಳನ್ನು ಪರೀಕ್ಷೆ ಮಾಡಿದರು ಅದೃಷ್ಟಾವತಾ ಯಾವುದೇ ಮಕ್ಕಳಿಗೆ ಊಟ ಮಾಡಿದ್ದರಿಂದ ತೊಂದರೆ ಯಾಗಿಲ್ಲ ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಡಾಕ್ಟರ್ ಹಾಗೂ ಅಧಿಕಾರಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.