ಉತ್ತರ ಕರ್ನಾಟಕ ಮುಂದೊಂದು ದಿನ ಸಪ್ರೇಟ್ ಆಗತ್ತೆ : ಶಾಸಕ ಚಂದ್ರು ಲಮಾಣಿ

ಸಮಗ್ರ ಪ್ರಭ ಸುದ್ದಿ
1 Min Read

ಮುಂಡರಗಿ : ರಾಜ್ಯದಲ್ಲಿ ತಣ್ಣಗಾದ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಮುನ್ನಲೆಗೆ ತಂದಿದ್ದಾರೆ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಕಾಂಗ್ರೆಸ್ & ಬಿಜೆಪಿ ಪಕ್ಷಗಳಿಗೆ ಹೆಚ್ಚು ಶಾಸಕರನ್ನು ಆಯ್ಕೆ ಮಾಡಿ ಕೊಡೋದೇ ಉತ್ತರ ಕರ್ನಾಟಕ ಹೀಗಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನೆಗಲಿಜೆನ್ಸಿ ಬೇಡ ಹೀಗೆ ನೆಗಲಿಜೆನ್ಸಿ ಮಾಡಿದರೆ ಉತ್ತರ ಕರ್ನಾಟಕ ಮುಂದೊಂದು ದಿನ ಸಪ್ರೇಟ್ ಆಗತ್ತೆ ಎಂದ ಶಾಸಕ ಚಂದ್ರು ಲಮಾಣಿ ಭಾಷಣದ ವೇಳೆ ಹೇಳಿದರು.

ಮುಂಡರಗಿಯ ಜಗದ್ಗುರು ತೋಂಟದಾರ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಭಾಷಣದ ವೇಳೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗನ್ನು ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ವಿ.ಪ ಸದಸ್ಯ ಎಸ್ ವಿ ಸಂಕನೂರ ಸೇರಿ ಜನಪ್ರತಿನಿಧಿಗಳ ಹಾಜರಿದ್ದರು.

Share this Article