ಹಿರೇಹಂದಿಗೋಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ತಾಲೂಕಿನ ಹಿರೇಹಂದಿಗೋಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಏಳನೆ ತರಗತಿಯ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನೀಯರಿಗೆ ಶಾಲಾ ಸಮವಸ್ತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಗಂಗಾಧರಗೌಡ ಗೌಡರ, ಶಾಲಾ ಎಸ್. ಡಿ. ಎಮ್. ಸಿ ಅಧ್ಯಕ್ಷ ನಿಂಗಪ್ಪ ತಳವಾರ ಅವರು ಶಾಲೆಯ ಮಕ್ಕಳಿಗೆ ಶಾಲಾ ಸಮವಸ್ತ್ರಗಳನ್ನು ವಿತರಣೆ ಮಾಡಿದರು.

ಮಕ್ಕಳೂ ಸಹ ಖುಷಿ-ಖುಷಿಯಿಂದಲೇ ಸಮವಸ್ತ್ರಗಳನ್ನು ತೆಗೆದುಕೊಂಡರು. ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಗ್ರಾ. ಪಂ. ಸದಸ್ಯರಾದ ಡಿ. ಬಿ. ಕರೀಗೌಡರ, ಶಾಲಾ ಎಸ್. ಡಿ. ಎಮ್. ಸಿ ಉಪಾಧ್ಯಕ್ಷೆ ಲಕ್ಷ್ಮೀ ಕುರ್ತಕೋಟಿ, ಸದಸ್ಯರುಗಳಾದ ಶಿವಪ್ಪ ಹೂಗಾರ, ಈರಣ್ಣ ಹಡಪದ, ಶರಣಪ್ಪ ಅಕ್ಕಿ, ಈರಣ್ಣ ಕುರ್ತಕೋಟಿ, ಪ್ರಶಾಂತ ಮಡಿಕೇರಿ, ಶರಣಪ್ಪ ಕುರಹಟ್ಟಿ ಸೇರಿದಂತೆ ಶಾಲೆಯ ಸಹಶಿಕ್ಷಕಿಯಾದ ಎಂ. ಎಚ್. ಮುಳಗುಂದ, ಎ. ಎ. ನದಾಫ, ಪ್ರದೀಪ್ ಚಿತ್ತರಗಿ, ಎ. ಕೆ. ಪೂಜಾರ, ಹೊದ್ಲೂರ, ಸಹ ಶಿಕ್ಷಕಿಯರಾದ ಮಂಜುಳಾ, ಹಾಗೂ ಅನ್ಸಾರಿ ಉಪಸ್ಥಿತರಿದ್ದರು.

Share this Article