ಗದಗ: ಸರ್ಕಾರ ಎಷ್ಟೇ ಆಧನಿಕ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದರು ಮೂಲ ದಾಖಲೆಯಂತೆ ನಕಲಿ ದಾಖಲೆ ಸೃಷ್ಟಿಸಿ ಜಮೀನು,ಆಸ್ತಿ ಸೇರಿದಂತೆ ವಿವಿಧ ಕೆಲಸಕ್ಕೆ ನಕಲಿ ಆಧಾರ ಕಾರ್ಡ ಬಳಸಿಕೊಂಡು ಸರ್ಕಾರದ ಕಣ್ಣಿಗೆ ಮಣ್ಣಿರೆಚುತ್ತಿದ್ದರು. ಇಂತಹ ಒಂದು ಖತರ್ನಾಕ ಗ್ಯಾಂಗ ದಾಖಲೆ ಸಮೇತವಾಗಿ ಶುಕ್ರವಾರ ಗದಗ ಉಪ ನೋಂದಣಿ ಅಧಿಕಾರಿಗಳ ಕಛೇರಿಯಲ್ಲಿ ಸುಮಾರು 25 ಕೋಟಿ ರೂ ಮೌಲ್ಯದ ಅಧಿಕ ಆಸ್ತಿಯನ್ನು ನಕಲಿ ಆಧಾರ ನೀಡಿ ಆಸ್ತಿ ಕಬಳಿಸುವಾಗ ಸಿಕ್ಕಿ ಬಿದ್ದಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ತರಹದ ವಂಚನೆಗಳು ಬೆಳಕಿಗೆ ಬಂದಿವೆ ಆದರೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಯನ್ನೆ ನಕಲು ಮಾಡಿ ಯಾರದೋ ಆಧಾರ ಕಾರ್ಡಗೆ ಮತ್ಯಾರದೋ ಹೆಸರು ಪೋಟೋ ಬಳಸಿ ಕೆಲ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಕೋಟ್ಯಾಂತರ ರೂಪಾಯಿ ಆಸ್ತಿಪಾಸ್ತಿಗಳನ್ನು ಕಬಳಿಕೆ ಮಾಡುತ್ತಿದ್ದಾರೆ.
ಗದುಗಿನ ಸಾಹುಕಾರ ಕುಟುಂಬದ ಆಸ್ತಿ ಕಬಳಿಕೆ ಯತ್ನ :
ಗದುಗಿನ ಸಾಹುಕಾರ ಕುಟುಂಬಸ್ಥರಾದ ಶೀಲಾಬಾಯಿ ಸಾಹುಕಾರ, ಯೋಗೇಶ ಸಾಹುಕಾರ, ಶ್ರೀಧರದಾಸ ಸಾಹುಕಾರ,ಮಂಜುಳದಾಸ ಸಾಹುಕಾರ, ತೃಪ್ತಿಬಾಯಿ ಸಾಹುಕಾರ, ಬಾವಿ ಸಾಹುಕಾರ್ ಗೆ ಸೇರಿದ ಜಿಲ್ಲಾಧಿಕಾರಿ ಕಚೇರಿ ಪಕ್ಕಕ್ಕೆ ಇರೋ ಸುಮಾರು 20 ಎಕರೆ ಜಮೀನು ಅಂದಾಜು ಮೌಲ್ಯ 25-30 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಮಾಡುವಾಗ ನಕಲಿ ಮಾಲೀಕರ ಸೋಗಿನಲ್ಲಿದ್ದ ತಂಡವು ನಕಲಿ ಆಧಾರ ನೀಡಿ ಕಬಳಿಕೆಗೆ ಯತ್ನ ನಡೆಸಿದ್ದರು ಆ ವೇಳೆ ಪೋಲಿಸರು ರೆಡ್ ಹ್ಯಾಂಡ ಆಗಿ ಹಿಡಿದಿದ್ದಾರೆ.
ಮೂಲ ಮಾಲೀಕರ ಆಧಾರ್ ಕಾರ್ಡ್ ಸೇರಿ ಹಲವು ದಾಖಲೆಗಳು ಫೋರ್ಜರಿ ಮಾಡಿದ್ದ ಗ್ಯಾಂಗ ಸದ್ಯ ಮೂವರು ಮಹಿಳೆಯರು ಸೇರಿ ಆರು ಜನರನ್ನು ವಶಕ್ಕೆ ಪಡೆದಿದ್ದಾರೆ.
ಕಾಣದ ಕೈಗಳಿಂದ ಇನ್ನೂ ಅನೇಕರು ಈ ಮೋಸದ ಬಲೆಗೆ ಬಿದ್ದಿದ್ದಾರೆ..?
ಜಿಲ್ಲೆಯಲ್ಲಿ ನಕಲಿ ಆಧಾರ ಬಳಸಿ ಅನೇಕ ಅಮಾಯಕರ ಆಸ್ತಿ ಪಾಸ್ತಿಗಳು ಕಬಳಿಕೆಯಾಗಿವೆ ಗದಗ, ಮುಂಡರಗಿ ಸೇರಿದಂತೆ ವಿವಿಧೆಡೆ ನೋಂದಣಿ ಅಧಿಕಾರಿಗಳ ಕಛೇರಿಯಲ್ಲಿ ಇಂತಹ ಗ್ಯಾಂಗ ಬಿಡು ಬಿಟ್ಟಿದೆ ಇದು ಒಂದೆ ಪ್ರಕರಣ ಅಲ್ಲದೆ ಗದಗ ಶಹರ ಠಾಣೆಯಲ್ಲಿ ಈ ಹಿಂದೆಯೂ ಇಂತಹ ಪ್ರಕರಣ ಕುರಿತು ಪ್ರಕರಣ ದಾಖಲಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ ಎನ್ನೋ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ಈ ಕುರಿತು ಸದ್ಯ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಇದರ ಜೊತೆಗೆ ಈ ಹಿಂದೆಯೂ ದಾಖಲಾದ ಪ್ರಕರಣಗಳ ಬಗ್ಗೆ ಗಂಭೀರವಾಗಿ ತನಿಖೆ ಮಾಡಬೇಕು ನಕಲಿ ಆಧಾರ ಜೊತೆಗೆ ದಾಖಲಾತಿ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.