ಗದಗ:ರಾಜ್ಯಾದ್ಯಂತ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾದಂತೆ ಜಿಲ್ಲೆಯ ರೈತರು ಟ ಮತ್ತೆ ಟೊಮ್ಯಾಟೋ ಬೆಳೆಯಲು ಮುಂದಾಗಿದ್ದಾರೆ.
ಜಿಲ್ಲಾದ್ಯಂತ ಟೊಮ್ಯಾಟೊ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟೊಮ್ಯಾಟೊ ಸಸಿಗಳಿಗೂ ಎಲ್ಲಿದ ಬೇಡಿಕೆ ಸಹ ಬಂದಿದೆ.
50,000 ಸಸಿ ಮಾರಾಟ :
ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದಲ್ಲಿರುವ ವೆಜಿಟೇಬಲ್ ಆಗ್ರೋ ನರ್ಸರಿಯಲ್ಲಿ ರೈತರು ಟೊಮ್ಯಾಟೊ ಸಸಿ ಖರೀದಿಯ ಭರಾಟೆ ಜೋರಾಗಿದೆ. ಶ್ರೀನಿವಾಸ ಮುತಗಾರ ಎಂಬ ನರ್ಸರಿ ಮಾಲೀಕರು ತಮ್ಮ ನರ್ಸರಿಯಲ್ಲಿ ಸುಮಾರು ಹತ್ತು ತಳಿಯ ಸಸಿಗಳನ್ನು ನಾಟಿ ಮಾಡಿದ್ದಾರೆ. ಯುಎಸ್, ಸಿಜೆಂಟಾ, ಖಡಾಷ,ಸುಕನೋ ಸೇರಿದಂತೆ ವಿವಿಧ ತಳಿಯ ಟೊಮ್ಯಾಟೊ ಸಸಿಗಳ ಬೆಳೆದಿದ್ದಾರೆ. ರೈತರು ದಿನ ನಿತ್ಯ ಐವತ್ತು ಸಾವಿರಕ್ಕೂ ಅಧಿಕ ಸಸಿಗಳನ್ನ ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ಟೊಮ್ಯಾಟೊ ಹಣ್ಣಿಗೆ ಬೆಲೆ ಜಾಸ್ತಿ ಇರುವ ಕಾರಣ ರೈತರು ಅತೀ ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ಬೆಳೆಯುತ್ತಿದ್ದಾರೆ.
ಇನ್ನು ರೈತರು ಸಹ ಕಳೆದ ನಾಲ್ಕೈದು ವರ್ಷದಿಂದ ಟೊಮ್ಯಾಟೊ ಬೆಳೆದು ನಷ್ಟ ಅನುಭಸಿದ್ದರು. ಟೊಮ್ಯಾಟೊ ಹಣ್ಣನ್ನ ರೋಡಿಗೆ , ತಿಪ್ಪೆಗೆ ಹಾಕಿ ಹೋಗುತ್ತಿದ್ದರು. ಈ ವರ್ಷ ಟೊಮ್ಯಾಟೊಗೆ ಬಂಗಾರದಂತಹ ಬೆಲೆ ಬಂದಿದೆ. ರೈತರಿಗೆ ಆದಾಯ ಕೂಡ ಹೆಚ್ಚಾಗಿದೆ. ಇದರಿಂದ ರೈತರು ವೆಜಿಟೇಬಲ್ ಆಗ್ರೋ ನರ್ಸರಿ ಗಳಿಗೆ ತರಳಿ ಟೊಮ್ಯಾಟೊ ಸಸಿಗಳ ಖರೀದಿ ಮಾಡುತ್ತಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ರೈತರು 9 ಸಾವಿಕ ಹೆಕ್ಟೇರ್ ನಷ್ಟು ಟೊಮ್ಯಾಟೊ ಬೆಳೆದಿದ್ದಾರೆ. ಈಗಾಗಲೇ ಮತ್ತೆ ರೈತರು 300 ಹೆಕ್ಟೇರ್ ನಷ್ಟು ಟೊಮ್ಯಾಟೊ ಸಸಿಗಳ ನಾಟಿ ಮಾಡಿದ್ದಾರೆ. ಈ ಬಾರಿ ಮತ್ತೆ ರೈತರಿಗೆ ಬಂಪರ್ ಬೆಲೆ ಸಿಗುತ್ತೇ ಎಂದು ಟೊಮ್ಯಾಟೊ ಬೆಳೆಯಲು ಮುಂದಾಗಿದ್ದಾರೆ.