KMF ಬ್ರಾಂಡ್​ ಅಂಬಾಸಿಡರ್ ಆದ ಹ್ಯಾಟ್ರಿಕ್ ಹೀರೋ  ಶಿವಣ್ಣ

ಸಮಗ್ರ ಪ್ರಭ ಸುದ್ದಿ
0 Min Read

ಬೆಂಗಳೂರು: ಕೆಎಂಎಫ್​​​ನ ಬ್ರ್ಯಾಂಡ್​ ಅಂಬಾಸಿಡರ್ ಆಗಲು ಹ್ಯಾಟ್ರಿಕ್​​ ಹೀರೋ ಶಿವಣ್ಣ ಒಪ್ಪಿಗೆ ಸೂಚಿಸಿದ್ದಾರೆ ಡಾ.ರಾಜ್​ಕುಮಾರ್​ ಅವರ ಕಾಲದಿಂದಲೂ ದೊಡ್ಮನೆ ದಿಗ್ಗಜರು ಕೆಎಂಎಫ್​ ಹಾಲಿಗೆ ಉಚಿತವಾಗಿ ಪ್ರಮೋಷನ್ ಮಾಡುತ್ತಾ ಬಂದಿದ್ದಾರೆ.

ಡಾ.ರಾಜ್​ಕುಮಾರ್​​ ನಂತರ ಪುನೀತ್​ ರಾಜ್​​ಕುಮಾರ್​​ ಉಚಿತವಾಗಿಯೇ ನಂದಿನಿ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಡಾ.ಶಿವರಾಜ್​​ಕುಮಾರ್​ ಕೂಡಾ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಖುದ್ದು ಶಿವರಾಜ್​ಕುಮಾರ್​ ಭೇಟಿಯಾಗಿ ಕೆಎಂಎಫ್​​ ಅಧ್ಯಕ್ಷ ಭೀಮಾನಾಯ್ಕ್​​, ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಮನವಿ ಮಾಡಿದ್ದರು. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರಚಾರದ ಕಾರ್ಯವನ್ನು ಶಿವಣ್ಣ ಉಚಿತವಾಗಿ ಮಾಡಿಕೊಡಲಿದ್ದಾರೆ.

Share this Article