ಗದಗ :ನೂತ ಗದಗ ಉಪವಿಭಾಗಾಧಿಕಾರಿಯಾಗಿ ಡಾ.ವೆಂಕಟೇಶ ನಾಯ್ಕ ಅವರು ಸೋಮವಾರ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು. ಇವರು 2014ರ ಬ್ಯಾಚನ ತಹಶೀಲ್ದಾರರಾಗಿ ಸೇವೆ ಆರಂಭಿಸಿದರು. ಗದಗ ಜಿಲ್ಲೆಯ ಮುಂಡರಗಿ, ಗಜೇಂದ್ರಗಡ, ರೋಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಮೂಡಬಿದರೆ ತಾಲೂಕುಗಳಲ್ಲಿ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿರುತ್ತಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧಿನ ಅಧಿಕಾರಿ ಹಾಗೂ ಚಿತ್ರದುರ್ಗ ರೈಲ್ವೆ ಯೋಜನೆಗಳ ವಿಶೇಷ ಭೂಸ್ವಾಧಿನಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು ಡಾ. ವೆಂಕಟೇಶ ನಾಯ್ಕ ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನವರಾಗಿದ್ದಾರೆ. ಗದಗ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಇವರಿಗೆ ಜಿಲ್ಲೆಯ ಎಲ್ಲ ತಹಶೀಲ್ದಾರರು ಹಾಗೂ ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿ ಸಿಬ್ಬಂದಿಗಳು ಶುಭಕೋರಿದ್ದಾರೆ.