ಪಿಂಕ್ ಐ ಅಥವಾ ಕಾಂಜಂಕ್ಟಿವಿಟಿಸ್ ಅಥವಾ ಮದ್ರಾಸ್ ಐ ರೋಗ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದೆ. ಈ ರೋಗದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಬೆಂಗಳೂರು : ಪಿಂಕ್ ಐ ಅಥವಾ ಕಾಂಜಂಕ್ಟಿವಿಟಿಸ್ ಅಥವಾ ಮದ್ರಾಸ್ ಐ ರೋಗ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದೆ. ಇದರಿಂದ ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ರೋಗ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾದ ಹಿನ್ನೆಲೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಅಲ್ಲದೇ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ತಿಳಿಸಿದೆ.
ಮದ್ರಾಸ್ ಐ ರೋಗದ ಲಕ್ಷಣಗಳು:
* ಕಣ್ಣು ಕೆಂಪಾಗುವುದು, ನೀರು ಸೋರುವಿಕೆ
* ಅತಿಯಾದ ಕಣ್ಣೀರು
* ಕಣ್ಣಿನಲ್ಲಿ ತುರಿಕೆ
* ಸತತ ಕಣ್ಣು ನೋವು ಮತ್ತು ಚುಚ್ಚುವಿಕೆ
* ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು
* ದೃಷ್ಟಿ ಮಂಜಾಗುವುದು
* ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತದಿಂದ ಕೂಡಿರುವುದು.
ಮದ್ರಾಸ್ ಐ ಬರದಂತೆ ತಡೆಯುವುದು ಹೇಗೆ ?
* ವೈಯಕ್ತಿಕವಾಗಿ ಸ್ವಚ್ಛತೆ ಗೆ ಆದ್ಯತೆ ಕೊಡಿ,
* ಆರೋಗ್ಯವಂತ ವ್ಯಕ್ತಿಯು ಸೊಂಕು ಇರುವ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕದಿಂದ ದೂರ ಇರುವುದು.
* ಸೊಂಕಿತ ವ್ಯಕ್ತಿ ಬಳಸಿದ ಕರವಸ್ರ್ತ ಮತ್ತು ಇತರ ವಸ್ತುಗಳನ್ನು ಬಳಸಬಾರದು.
* ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನ ತೊಳೆಯಬೇಕು.
* ಸೊಂಕಿತ ವ್ಯಕ್ತಿಗಳಿಗೆ ಶೀತ, ಜ್ವರ, ಕೆಮ್ಮು ಇದ್ದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು
* ತೀವ್ರ ಸೊಂಕು ಉಂಟಾದರೆ ತಕ್ಷಣವೇ ನೇತ್ರ ತಜ್ಞರನ್ನ ಭೇಟಿ ಮಾಡಬೇಕು.
ರೋಗ ಕಡಿಮೆಯಾಗಲು ಏನು ಮಾಡಬೇಕು ?
* ಸ್ಪಚ್ಫವಾದ ನೀರಿನಿಂದ ಕಣ್ಣುಗಳನ್ನ ಶುಚಿಗೊಳಿಸಿ
* ಸೊಂಕು ಕಂಡು ಬಂದ ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಪಡೆಯಿರಿ.
* ಸೊಂಕಿತ ವ್ಯಕ್ತಿಗಳು ಪೌಷ್ಟಿಕ ಆಹಾರ ಸೇವಿಸಿ.
* ಸೊಂಕಿತ ವ್ಯಕ್ತಿಗಳು ಶುಚಿಯಾದ ಕರವಸ್ತ್ರ ಬಳಸಿ
ಏನು ಮಾಡಬಾರದು ?
* ಕೈಗಳಿಂದ ಪದೇ ಪದೇ ಕಣ್ಣುಗಳನ್ನ ಮುಟ್ಟಬೇಡಿ.
* ಸ್ವಯಂ ಚಿಕಿತ್ಸಾ ವಿಧಾನಗಳನ್ನ ಮಾಡಬಾರದು.
* ಸೊಂಕಿತ ವ್ಯಕ್ತಿಯ ಸನಿಹದಿಂದ ದೂರವಿರಿ.
ಸೊಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನ ಬಳಸುವುದು.
ಮದ್ರಾಸ್ ಐ ಮತ್ತು ಡೆಂಗ್ಯೂ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಚಿಕಿತ್ಸೆ ನಿಡುತ್ತಿದ್ದೇವೆ ನಾವು ಕಡಿಮೆ ಮಾಡಲಿಕ್ಕೆ ಕ್ರಮ ವಹಿಸುತ್ತೆವೆ ಎಂದು ಹೇಳಿದರು.