ಗದಗ: ಇತ್ತೀಚಿಗೆ ಗದಗ-ಬೆಟಗೇರಿ ನಗರ ಸಭೆ ಸದಸ್ಯರೆ ನಗರ ಸಭೆಯಲ್ಲಿ ನೀಡುವ ಫಾರಂ ನಂ 3 ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆ ಸದಸ್ಯರಾದ ಬರಕತ್ ಅಲಿ ಮುಲ್ಲಾ ಹಾಗೂ ಲಕ್ಷ್ಮಿ ಅನಿಲಕುಮಾರ್ ಸಿದ್ದಮ್ಮನಹಳ್ಳಿ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು ದೂರಿನ ಮೇರಿಗೆ ಮೇರೆಗೆ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ್ ನಗರ ಸಭೆಗೆ ಭೇಟಿ ನೀಡಿ ತನಿಖೆ ಮಾಡಿ ಪೌರಾಯುಕ್ತರಿಂದ ಲಿಖಿತ ಅಂಕಿ ಅಂಶಗಳ ವರದಿ ತೆಗೆದುಕೊಂಡಿದ್ದರು ನಂತರ ವರದಿಯಲ್ಲಿ ನಗರ ಸಭೆ ಕಂದಾಯ ಅಧಿಕಾರಿ ಮಹೇಶ ಹಡಪದ ಕರ್ತವ್ಯಲೋಪ ಎಸಗಿದ್ದು ಕಂಡು ಬಂದು ಜಿಲ್ಲಾಧಿಕಾರಿಗಳಿಗೆ ವರದಿ ವರದಿ ಸಲ್ಲಿಸಿದ್ದರು ವರದಿ ಅನ್ವಯ ಜಿಲ್ಲಾಧಿಕಾರಿ ಎಂ ಎನ್ ವೈಶಾಲಿ ಕರ್ತವ್ಯ ಲೋಪದಡಿ ಗದಗ-ಬೆಟಗೇರಿ ನಗರಸಭೆ ಸೇವೆಯಿಂದ ವಜಾಗೊಳಿಸಿ ಇಲಾಖಾ ವಿಚಾರಣೆ ಬಾಕಿ ಇರಿಸಿ ಆದೇಶ ಹೊರಡಿಸಿದ್ದಾರೆ.
ಸೇವೆಯಿಂದ ವಜಾ ಯಾಕೆ..?
01-04-2023ರಿಂದ 13-07-23. ರವರೆಗೆ ನಗರಸಭೆಯಿಂದ ಒಟ್ಟು 3148 ಫಾರ್ಮ್ ನಂ.3 ವಿತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನವರ್ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಮಯದಲ್ಲಿ ಪೌರಾಯುಕ್ತರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದರು.
ಆದರೆ ರಿ.ಸ.ನಂ 862+863-864 ವಸತಿ ವಿನ್ಯಾಸದಲ್ಲಿ 979 ಹಾಗೂ ಇನ್ನುಳಿದ ಬೇರೆ ಬೇರೆ ನಿವೇಶನ ಸೇರಿದಂತೆ ಒಟ್ಟು 1063 ಫಾರ್ಮ್ ನಂ.3 ವಿತರಣೆ ಮಾಡಲಾಗಿದೆ. ಆದರೆ ಇದರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೂರ್ಣ ಪ್ರಮಾಣದ ನಿವೇಶನ ಅಭಿವೃದ್ಧಿ ಹೊಂದಿದ ಬಗ್ಗೆ ನಿರಪೇಕ್ಷಣಾ ಪತ್ರ ಪಡೆಯದೇ ಕಂದಾಯ ಅಧಿಕಾರಿ ಮಹೇಶ್ ಹಡಪದ ಫಾರ್ಮ್ ನಂ.3 ವಿತರಣೆ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಅಪರ ಜಿಲ್ಲಾಧಿಕಾರಿಗಳ ವರದಿ ಆಧಾರಿಸಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.