ಬಿಂಕದಕಟ್ಟಿ ಮೃಗಾಲಯಕ್ಕೆ ಶೀಘ್ರವೆ ಜಿರಾಫೆ,ಜಿಬ್ರಾ ಹಾಗೂ ಆನೆಗಳ ಆಗಮನ: ಸಚಿವ ಎಚ್ಕೆ ಪಾಟೀಲ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಶನಿವಾರ ಬಿಂಕದಕಟ್ಟಿಯ ಮೃಗಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಹುಲಿ ಪ್ರಾಣಿ ಮನೆ ಸೇರಿದಂತೆ ವಿವಿಧ ಪ್ರಾಣಿ ಮನೆಗಳನ್ನು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಉದ್ಘಾಟಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವದಲ್ಲಿ ಇರುವ ಹುಲಿಗಳ ಪ್ರಮಾಣದಲ್ಲಿ ಶೇ. 60ರಷ್ಟು ಭಾರತ ದೇಶದಲ್ಲಿರುವದು ನಮ್ಮ ದೇಶದ ಹೆಮ್ಮೆಯ ವಿಷಯ. ವಿಶ್ವದಲ್ಲಿ ಒಟ್ಟು 5,578 ವಿವಿಧ ಜಾತಿಯ ಹುಲಿಗಳ ಸಂತತಿ ಇದ್ದು, ಈ ಪೈಕಿ ನಮ್ಮ ರಾಜ್ಯದಲ್ಲಿ 435 ಹುಲಿಗಳು ಇರುವದು ಸಂತಸ ತಂದಿದೆ ಕರ್ನಾಟಕ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಹುಲಿಗಳ ಸಂತತಿ ಸರಿ ಪ್ರಮಾಣದಲ್ಲಿದೆ.

ಮೃಗಾಲಯಕ್ಕೆ ಶೀಘ್ರದಲ್ಲೇ ಜಿರಾಫೆ, ಜಿಬ್ರಾ,ಆನೆಗಳು ಆಗಮನ :

ಬಿಂಕದಕಟ್ಟಿ ಮೃಗಾಲಯಕ್ಕೆ 2024ರ ಜನವರಿ 26ರಂದು ಹೊಸ ಅತಿಥಿಗಳಾಗಿ ಜಿರಾಫೆ ಹಾಗೂ ಜಿಬ್ರಾಗಳು ಆಗಮಿಸಲಿವೆ. ಮೃಗಾಲಯದಲ್ಲಿ ಈ ಅತಿಥಿಗಳ ಸ್ವಾಗತಕ್ಕಾಗಿ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗುತ್ತಿದೆ ಜೊತೆಗೆ ಆನೆಯು ಕರೆತರುವ ಕುರಿತು ಅರಣ್ಯ ಸಚಿವರೊಂದಿಗೆ ಮಾತಾನಾಡಿದ್ದೇನೆ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಈ ವೇಳೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದಿಪೀಕಾ ಬಾಜಪೇಯಿ, ಉಪವಿಭಾಗಾಧಿಕಾರಿ ಗಂಗಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಸೇರಿದಂತೆ ಗಣ್ಯರು, ಹಿರಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Share this Article