ಲಕ್ಷ್ಮೇಶ್ವರ: ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅಂಚೆ ಇಲಾಖೆಯ ಹೊಸ ಉಳಿತಾಯ ಯೋಜನೆಯು ಮಹಿಳೆಯರಿಗೆ ತುಂಬಾ ಅನುಕೂಲಕರವಾಗಿದ್ದು ಎಲ್ಲಾ ಮಹಿಳೆಯರು ಸಂಪೂರ್ಣ ಮಹಿಳಾ ಸಮ್ಮಾನ ಯೋಜನೆ ಲಾಭವನ್ನು ಎಲ್ಲ ಮಹಿಳೆಯರು ಪಡೆಯಬೇಕೆಂದು ಗದಗ ಅಂಚೆ ವಿಭಾಗದ ಅಧೀಕ್ಷಕರಾದ ಚಿದಾನಂದ ಪದ್ಮಶಾಲಿ ಹೇಳಿದರು.
ಅವರು ಗುರುವಾರ ಲಕ್ಷ್ಮೇಶ್ವರ ಅಂಚೆ ಕಚೇರಿಯಲ್ಲಿ ಹಮ್ಮಿಕೊಂಡ ಸಂಪೂರ್ಣ ಮಹಿಳಾ ಸಮ್ಮಾನ ಉಳಿತಾಯ ಗ್ರಾಮಗಳ ಘೋಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಮ್ಮಾನ ಉಳಿತಾಯ ಸರ್ಟಿಫಿಕೇಟ್ ಯೋಜನೆಯಲ್ಲಿ ದೇಶದ ಎಲ್ಲಾ ಮಹಿಳೆಯರು ಯಾವುದೇ ವಯಸ್ಸಿಯ ಮಿತಿಯಿಲ್ಲದೆ ಕನಿಷ್ಠ ಒಂದು ಸಾವಿರದಿಂದ ಗರಿಷ್ಟ ಎರಡು ಲಕ್ಷದ ವರೆಗೆ ಹಣವನ್ನು ಯಾವುದೇ ಅಂಚೆ ಕಚೇರಿಯಲ್ಲಿಯಾದರೂ ತೊಡಗಿಸಬಹುದು ಹಾಗೂ ಅದಕ್ಕೆ ಇಲಾಖೆಯಿಂದ ಶೇಕಡಾ 7.5% ರಷ್ಟು ವಾರ್ಷಿಕ ಬಡ್ಡಿಯನ್ನು ಕೊಡಲಾಗುತ್ತದೆ.
ಈ ಯೋಜನೆಯು ಕೇವಲ ಎರಡು ವರ್ಷದ ಅವಧಿಯವರೆಗೆ ಮಾತ್ರ ಜಾರಿಯಲ್ಲಿದ್ದು ಇದು 2025 ಮಾರ್ಚ ಅಂತ್ಯಕ್ಕೆ ಮುಕ್ತಾಯಗೊಳ್ಳುತ್ತದೆ ಕೂಡಲೇ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಮುಂದಾಗ ಬೇಕು ಎಂದು ಹೇಳಿದರು.
ಲಕ್ಷ್ಮೇಶ್ವರ ಉಪ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಬರುವಂತಹ ಆದ್ರಹಳ್ಳಿ ಗ್ರಾಮದಲ್ಲಿ 164, ಫುಟಗಾವ್ ಬಡ್ನಿ ಗ್ರಾಮದಲ್ಲಿ 147,ಬಟ್ಟೂರ್ ಗ್ರಾಮದಲ್ಲಿ 102 ಹಾಗೂ ಮುಳಗುಂದ್ ಉಪ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಬರುವಂತಹ ನೀಲಗುಂದ ಗ್ರಾಮದಲ್ಲಿ 100 ಹೊಸ ಖಾತೆಗಳನ್ನು ತೆರೆದು ಅಲ್ಲಿನ ಶಾಖಾ ಅಂಚೆ ಪಾಲಕರು ಸಂಪೂರ್ಣ ಮಹಿಳಾ ಸಮ್ಮಾನ ಉಳಿತಾಯ ಗ್ರಾಮಗಳನ್ನಾಗಿ ಘೋಷಿಸಲಿಕ್ಕೆ ಸಹಕರಿಸಿದ್ದಾರೆ ಸಹಕಾರ ನೀಡದವರಿಗೆ ಇಲಾಖೆ ವತಿಯಿಂದ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಿಂದ ಪ್ರೇರೇಪಣೆ ಗೊಂಡು ಉಳಿದ ಅಂಚೆ ಕಚೇರಿಗಳ ಸಿಬ್ಬಂದಿಗಳೂ ಕೂಡ ಹೆಚ್ಚಿನ ಸಂಖ್ಯೆಯ ಮಹಿಳಾ ಸಮ್ಮಾನ ಖಾತೆಗಳನ್ನು ತೆರೆಯುವುದರ ಜೊತೆಗೆ ಇಲಾಖೆಯ ಇನ್ನುಳಿದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮಿಸಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಗದಗ ಅಂಚೆ ಉಪ ವಿಭಾಗದ ಸಹಾಯಕ ಅಧೀಕ್ಷಕ ಶ್ರೀಕಾಂತ್ ಜಾಧವ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮೇಶ್ವರ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ ವಹಿಸಿಕೊಂಡಿದ್ದರು. ಪ್ರಾರ್ಥನಾ ಗೀತೆಯನ್ನು ಕು.ವನಜಾಕ್ಷಿ ಬ್ಯಾಲಹುಣಸಿ ಹಾಡಿದರು ಹಾಗೂ ಶರಣಯ್ಯ ಹಿರೇಮಠ್ ನಿರೂಪಿಸಿದರು.
ಯೋಜನೆ ಅಡಿ ತೆರೆದ ಹೊಸ ಖಾತೆಗಳ ವಿವಿರ:
ಏಪ್ರೀಲ ಒಂದು 2023 ರಿಂದ ಇಂದಿನ ವರೆಗೆ ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ ಯೋಜನೆಯಡಿ
ಗದಗ ಜಿಲ್ಲೆಯಲ್ಲಿ 2,233 ಖಾತೆಗಳು ಕೊಪ್ಪಳ ಜಿಲ್ಲೆಯಲ್ಲಿ 1633 ಖಾತೆಗಳು ಹಾಗೂ ಗದಗ ಅಂಚೆ ವಿಭಾಗದಲ್ಲಿ ತೆರೆದ ಹೊಸ ಖಾತೆಗಳು 3866 ಎಂದು ಮಾಹಿತಿ ನೀಡಿದರು.