ಸ್ಟಾಫ್ ಸೆಲೆಕ್ಷನ್ ಕಮಿಷನ್ ಪ್ರತಿ ವರ್ಷವು ಸಹ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳು, ಕಚೇರಿಗಳಲ್ಲಿ ಕಿರಿಯ ಅಭಿಯಂತರರು (SSC Junior Engineer) ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಲು ಅಧಿಸೂಚನೆ ಬಿಡುಗಡೆ ಮಾಡುತ್ತದೆ. ಪ್ರತಿ ಸಾಲಿನಂತೆ ಈಗ 2023ನೇ ಸಾಲಿನ ಎಸ್‌ಎಸ್‌ಸಿ ಜೆಇ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1324 ಜೆಇ ಹುದ್ದೆಗಳನ್ನು ವಿವಿಧ ಸಂಸ್ಥೆ / ಕಚೇರಿಗಳಲ್ಲಿ ನೇಮಕ ಮಾಡಲು ಈ ಪರೀಕ್ಷೆ ನಡೆಸಲಾಗುತ್ತದೆ. ಆಸಕ್ತರು ಹುದ್ದೆಗಳ ಕುರಿತು ಇನ್ನಷ್ಟು ಡೀಟೇಲ್ಸ್ ಕೆಳಗಿನಂತೆ ತಿಳಿದು ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಿ.
ಎಸ್‌ಎಸ್‌ಸಿ ಕಿರಿಯ ಅಭಿಯಂತರರ ಪರೀಕ್ಷೆ 2023 ಓಪನ್ ಕಾಂಪಿಟಿಟಿವ್ ಪರೀಕ್ಷೆ ಆಗಿದ್ದು, ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳು, ಇಲಾಖೆಗಳು, ಸಚಿವಾಲಯಗಳಿಗೆ ಜೂನಿಯರ್ ಇಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ) ನೇಮಕಾತಿಗಾಗಿ ನಡೆಸಲಾಗುತ್ತದೆ. ‘ಬಿ’ ಗ್ರೂಪ್, ನಾನ್-ಗೆಜೆಟೆಡ್, ನಾನ್ -ಮಿನಿಸ್ಟೇರಿಯಲ್ ಹುದ್ದೆಗಳು ಇವಾಗಿವೆ.
ನೇಮಕಾತಿ ಪ್ರಾಧಿಕಾರ : ಸ್ಟಾಫ್ ಸೆಲೆಕ್ಷನ್ ಕಮಿಷನ್
ಹುದ್ದೆ ಹೆಸರು : ಜೂನಿಯರ್ ಇಂಜಿನಿಯರ್ (ಗ್ರೂಪ್ ಬಿ)
ಹುದ್ದೆಗಳ ಸಂಖ್ಯೆ : 1324
ವೇತನ ಶ್ರೇಣಿ : Rs.35,400- 1,12,400.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅಪ್ಲಿಕೇಶನ್ ಸ್ವೀಕಾರ ಆರಂಭ ದಿನಾಂಕ : 26-07-2023
* ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಕೆಗೆ ಕೊನೆ ದಿನಾಂಕ : 16-08-2023 ರ ರಾತ್ರಿ 11 ಗಂಟೆವರೆಗೆ.
* ಆನ್‌ಲೈನ್ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 16-08-2023 ರ ರಾತ್ರಿ 11 ಗಂಟೆವರೆಗೆ.
ಅರ್ಜಿ ಶುಲ್ಕ ರೂ.100 ಪಾವತಿಸಬೇಕು.
ಮಹಿಳಾ ಅಭ್ಯರ್ಥಿಗಳು, ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ಪಾವತಿ ವಿನಾಯಿತಿ ನೀಡಲಾಗಿದೆ.