ಕಪ್ಪತ್ತಗುಡ್ಡ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ: ಆರ್‌ಎಫ್‌ಒ

graochandan1@gmail.com
1 Min Read

 

ಗದಗ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಪ್ಪತ್ತಗುಡ್ಡದ ಗುಡ್ಡಗಾಡು ಪ್ರದೇಶ ಮತ್ತು ಮಣ್ಣು ಮಳೆಯಿಂದಾಗಿ ಜರಿಯುತ್ತಿದೆ. ಆದಕಾರಣ, ಡೋಣಿ ಮಾರ್ಗವಾಗಿ ಕಪ್ಪತ್ತಗುಡ್ಡದ ಗಾಳಿಗುಂಡಿಗೆ ಗುಡ್ಡಕ್ಕೆ ಹೋಗುವ ರಸ್ತೆಯನ್ನು ಪ್ರವಾಸಿಗರು, ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಹವಾಮಾನ ಇಲಾಖೆ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮುಂದಿನ ಆದೇಶದವರೆಗೆ ಈ ಮಾರ್ಗದಲ್ಲಿ ಕಪ್ಪತ್ತಗುಡ್ಡ ಪ್ರವೇಶ ನಿರ್ಬಂಧಿಸಲಾಗಿದೆ. ಸಾರ್ವಜನಿಕರು, ಪ್ರವಾಸಿಗರು ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಮುಂಡರಗಿ ಆರ್‌ಎಫ್‌ಒ ವೀರೇಂದ್ರ ಮರಿಬಸಣ್ಣವರ ತಿಳಿಸಿದ್ದಾರೆ.

ಗಾಳಿಗುಂಡಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗಳು ಬರುತ್ತಿದ್ದು, ವಾಹನ ದಟ್ಟಣೆಯಿಂದ ಪ್ಲಾಸ್ಟಿಕ್‌ ಮತ್ತು ಶಬ್ದ ಮಾಲಿನ್ಯದಿಂದ ವನ್ಯಜೀವಿಗಳ ಆವಾಸಕ್ಕೆ ತೊಂದರೆ ಆಗುತ್ತಿದೆ. ಕಪ್ಪತ್ತಗುಡ್ಡ ಅರಣ್ಯ ಪ್ರದೇಶವು ವನ್ಯಜೀವಿಧಾಮ ಆಗಿರುವುದರಿಂದ ಅರಣ್ಯ ಪ್ರದೇಶದೊಳಗೆ ಪೂರ್ವಾನುಮತಿ ಇಲ್ಲದೇ ಪ್ರವೇಶ ನಿಷಿದ್ಧವಾಗಿದೆ. ಅನಧಿಕೃತವಾಗಿ ಕಾಡು ಪ್ರವೇಶಿಸುವುದು ಶಿಕ್ಷಾರ್ಹ ಅಪರಾಧ ಎಂದು ಅವರು ತಿಳಿಸಿದ್ದಾರೆ.

- Advertisement -
Ad image

Share this Article