ಗದಗ: ನಗರದ ಆದರ್ಶ ಶಿಕ್ಷಣ ಸಂಸ್ಥೆಯ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಶಿಬಿರದ ದತ್ತು ಗ್ರಾಮ ಅಂತೂರು-ಬೆಂತೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಮನಕವಾಡವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವು ಎಷ್ಟು ಮಹಾವಿದ್ಯಾಲಯಗಳನ್ನು ಗಮನಿಸಿದ್ದೇವೆ, ಬರೀ ಏಳು ದಿನದ ಶಿಬಿರಕ್ಕೆ ಗ್ರಾಮಕ್ಕೆ ಬಂದು ಹೋಗುತ್ತಾರೆ ಆದರೆ ಗದುಗಿನ ಎ ಎಸ್ ಎಸ್ ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕವು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ವನಮೋತ್ಸವ ಕಾರ್ಯಕ್ರಮದೊಂದಿಗೆ ಶಾಲೆಗೆ ಬೇಕಾಗುವ ಸಾಮಗ್ರಿಗಳನ್ನು ದಾನ ರೂಪದಲ್ಲಿ ನೀಡಿರುವುದು ಬಹಳ ಸಂತಸ ತಂದಿದೆ ಜೊತೆಗೆ ಇಡೀ ಮುಖ್ಯೋಪಾಧ್ಯಾಯರ ಕೊಠಡಿಗೆ ಮ್ಯಾಟಿಂಗ್ ಮಾಡಿಸುವುದಷ್ಟೇ ಅಲ್ಲ ಪ್ರಾಥಮಿಕ ಶಾಲೆಯ ಆವರಣದಲ್ಲಿ ತೆಂಗಿನ ಸಸಿಗಳು ಹಾಗೂ ಅಲಂಕಾರಿಕ ಸಸಿಗಳನ್ನು ನೆಡುವ ಮೂಲಕ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದ್ದಾರೆ ಹೀಗಾಗಿ ಆ ಸಂಸ್ಥೆಯ ಪದಾಧಿಕಾರಿಗಳಿಗೆ ಊರಿನ ಪರವಾಗಿ ಶಾಲೆಯ ಪರವಾಗಿ ಅಭಿನಂದನೆಗಳನ್ನ ಸಲ್ಲಿಸಿದರು.
ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಎನ್ ಎಸ್ ಎಸ್ ನಲ್ಲಿ ಬಹಳ ಅರ್ಥಪೂರ್ಣವಾಗಿನ ಕೆಲಸ ಮಾಡುತ್ತಿದೆ ಒಂದು ಹಳ್ಳಿಯತ್ತ ಗಮನವನ್ನು ಕೇಂದ್ರೀಕರಿಸುವುದು ಮತ್ತು ಅಭಿವೃದ್ಧಿ ದೃಷ್ಟಿಕೋನಕ್ಕಾಗಿ ಕಾರ್ಯಕ್ರಮವನ್ನು ಕೈಗೊಳ್ಳುವುದು ತುಂಬಾ ಉತ್ತಮವಾಗಿದೆ ಬರಿ ದತ್ತು ಪಡೆದು ಶಿಬಿರ ಮಾಡಿ ಬರುವುದು ಅಷ್ಟೇ ಅಲ್ಲ ಆ ಗ್ರಾಮದ ಕುಂದು ಕೊರತೆಗಳನ್ನ ಅರ್ಥ ಮಾಡಿಕೊಂಡು ಸುಧಾರಿಸಬೇಕು ಸಮುದಾಯದ ಅಭಿವೃದ್ಧಿ ಸರ್ಕಾರಿ ಇಲಾಖೆಗಳ ಯೋಜನೆಗಳು ಆರೋಗ್ಯ ಶಿಬಿರ ಪ್ರಥಮ ಚಿಕಿತ್ಸೆ ಉಚಿತ ಕಾನೂನು ಕಾರ್ಯಗಾರ ಮಹಿಳಾ ಮಂಡಲಗಳ ಅಭಿವೃದ್ಧಿ ಡಿಜಿಟಲ್ ಸಾಕ್ಷರತೆ ಅಂಗವಿಕಲರು ನಿರ್ಗತಿಕರ ಸಹಾಯಕ್ಕೆ ಹಾಗೆ ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಗ್ರಾಮವನ್ನು ಸುಧಾರಿಸುವ ಕಾರ್ಯ ಶಿಬಿರದ ನಂತರವೂ ನಡೆಯಬೇಕು ಅಂತ ಒಂದು ಕಾರ್ಯವನ್ನು ಶಿಬಿರದ ನಂತರ ಈ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ ಸಮಾಜ ಸೇವೆಯಿಂದ ವಿದ್ಯಾರ್ಥಿಗಳ ವ್ಯಕ್ತಿತ್ವವು ವಿಕಾಸ ಗೊಳ್ಳುತ್ತದೆ ಎಂಬುದು ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ಹಂಚಿಕೊಂಡರು ಹೀಗೆ ಅನೇಕ ವಿಚಾರಗಳನ್ನು ತಮ್ಮ ಉದ್ಘಾಟನಾ ನುಡಿಗಳಲ್ಲಿ ಹಂಚಿಕೊಂಡರು.
ವನಮೋತ್ಸವ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಎಲ್ಲ ಪದಾಧಿಕಾರಿಗಳು ಶಾಲೆಯ ಮುಖ್ಯೋಪಾಧ್ಯಾಯರು ದೈಹಿಕ ಶಿಕ್ಷಕ ಅಂಗಡಿ. ಪ್ರೊ. ಬಾಹುಬಲಿ ಪಿ ಜೈನರ ಸ್ವಯಂಸೇವಕರಾದ ಮನೋಜ್ ದಲಬಂಜನ್, ಅಶ್ವತ್ಥಮ್ ಚವಡಿ, ಶಿವಯೋಗಿ ಗಡ್ಡರಮಠ ರಾಘವೇಂದ್ರ ಪೂಜಾರ್, ಸಾಗರ್ ಪಾಟೀಲ್, ಪ್ರದೀಪ್ ಬೆಂತೂರು , ಆದರ್ಶ್ ಅಕ್ಕಿ, ಆಸಿಫ್ ಮಹಾವಿದ್ಯಾಲಯದ ಹಳೆಯ ಎನ್ ಎಸ್ ಎಸ್ ಸ್ವಯಂಸೇವಕ ಕುಮಾರ್ ರೋಹಿತ್ ನಾಯ್ಕರ್ ತನ್ನ ಹುಟ್ಟುಹಬ್ಬವನ್ನು ಪ್ರಾಥಮಿಕ ಶಾಲೆಯಲ್ಲಿ ಆಚರಿಸಿ ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು.