ಗದಗ: ರಾಜ್ಯದಲ್ಲಿ ಗೃಹ ಲಕ್ಷ್ಮೀ ಯೋಜನೆ ಜಾರಿ ವಿಚಾರವಾಗಿ ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಿದ್ದೇ ತಡ ಮಹಿಳೆಯರು ಅರ್ಜಿ ಸಲ್ಲಿಸಲು ಬೆಂಗಳೂರು ಒನ್,ಗ್ರಾಮ ಒನ್,ನಗರ ಸೇವಾ ಕೇಂದ್ರ ಸೇರಿದಂತೆ ಸರ್ಕಾರದ ಸೇವಾ ಕೇಂದ್ರದ ಮುಂದೆ ಮಹಿಳೆಯರು ಕಛೇರಿ ಆರಂಭಕ್ಕೂ ಮುನ್ನಾ ಸರತಿ ಸಾಲುಗಳಲ್ಲಿ ನಿಂತು ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ.
ಇತ್ತ ಗದಗ ನಗರದಲ್ಲಿ ಕಳೆದ ಒಮದು ವಾರದಿಂದ ಜಿಟಿ ಜಿಟಿ ಮಳೆ ಇದ್ದು ಮಳೆ ಲೆಕ್ಕಿಸದೆ ಬೆಳಿಗ್ಗೆ 5-6 ಗಂಟೆಯಿಂದ ಮಹಿಳೆಯರು ಅರ್ಜಿ ಸಲ್ಲಿಸಲು ಕ್ಯೂ ಹಚ್ಚಿದ್ದಾರೆ.ಮುಂಜಾನೆ ಇಂದ ಸಂಜೆವರೆಗೂ ಒಂಟಿಕಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಲು ವಯಸ್ಸಾದ ಅಜ್ಜಿಯರು ಸೇವಾ ಕೇಂದ್ರದ ಮುಂದೆ ನಿಂತಿದ್ದಾರೆ ಆದರೆ ಸರ್ವರ ಸಮಸ್ಯೆಯಿಂದ ಅರ್ಜಿ ಸ್ವೀಕೃತ ತಡವಾಗುತ್ತಿದ್ದು ಜೊತೆಗೆ ಸರ್ಕಾರ 8147500500 ಮೊಬೈಲ ಸಂಖ್ಯೆಗೆ ನೋಂದಣಿಗೊಳಿಸಿ ಅರ್ಜಿ ಸ್ವೀಕರಿಸಲು ಸಮಯ ಮತ್ತು ದಿನಾಂಕ ನಿಗಧಿ ಮಾಡಿ ಅರ್ಜಿ ಸಲ್ಲಿಸಲು ಮೆಸೆಜ ಕಳುಹಿಸುತ್ತಿದ್ದರು ಅದೇ ದಿನ ತೆರಳಿ ಅರ್ಜಿ ಸಲ್ಲಿಸಿಲು ಸೂಚಿಸುತ್ತಿತ್ತು ಆದರೆ ಸರ್ಕಾರ ಈ SMS ವ್ಯವಸ್ಥೆಯನ್ನು ರದ್ದು ಗೊಳಿಸಿದಕ್ಕಾಗಿ ಇಂದು ಎಲ್ಲ ನಗರದ ಸೇವಾ ಕೇಂದ್ರದ ಮುಂದೆ ದೊಡ್ಡ ಕ್ಯೂ ನಿರ್ಮಾಣವಾಗಿದೆ.
ಬೆಟಗೇರಿಯಲ್ಲಿ ರಸ್ತೆ ತಡೆ:
ಬೆಟಗೇರಿ ಭಾಗದಲ್ಲಿನ ಸೇವಾ ಕೇಂದ್ರದ ಸಿಬ್ಬಂದಿ ನಾವು ದಿನಕ್ಕೆ 60 ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಕ್ಕೆ ಅಂಬಾಭವಾನಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ನಾವು ನಮ್ಮ ಮನೆ ಕೆಲಸ ಹಾಗೂ ದುಡಿಮೆ ಬಿಟ್ಟು ಬಂದಿದ್ದೆವೆ ಇವರು ಕೆವಲ 60 ಅರ್ಜಿ ತೆಗೆದುಕೊಳ್ಳುತ್ತೇವೆ ಅಂದರೆ ಹೇಗೆ ಜೊತೆಗೆ ಈ ಜಿಟಿ ಜಿಟಿ ಮಳೆ ನಮ್ಮ ಸಮಸ್ಯೆ ಕೇಳೊರು ಯಾರು..? ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು ನಂತರ ಪೋಲಿಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸರ್ಕಾರ ಅರ್ಜಿ ಸಲ್ಲಿಸಲು ಇನ್ನೂ ಹೆಚ್ಚಿನ ಕ್ರಮ ಕೈಗೊಂಡು ಗೃಹ ಲಕ್ಷ್ಮೀ ಅರ್ಜಿ ಸರಳಿಕರಣಗೊಳಿಸ ಬೇಕು ಎಂದು ಮಹಿಳೆಯರು ಒತ್ತಾಯಿಸಿದ್ದಾರೆ.