ರೈಲ್ವೆ ಟಿಕೆಟ್ ಬುಕ್ ಮಾಡುವ ವೆಬ್‌ಸೈಟ್ ಐಆರ್‌ಸಿಟಿಸಿಯ ಆನ್‌ಲೈನ್ ಬುಕಿಂಗ್‌ನಲ್ಲಿ ಅಡಚಣೆ ಎದುರಾಗಿದೆ. ಅತ್ತ ಆಪ್ ಕೂಡ ಕಾರ್ಯ ನಿರ್ವಹಿಸುತ್ತಿಲ್ಲ. ದಟ್ಟಣೆಯ ಸಮಯದಲ್ಲಿಯೇ ಐಆರ್‌ಸಿಟಿಸಿ ಸರ್ವರ್ ಡೌನ್ ಆಗಿರುವ ಬಗ್ಗೆ ಜನರು ಟ್ವಿಟರ್‌ನಲ್ಲಿ ದೂರುಗಳ ಸುರಿಮಳೆ ಸುರಿಸಿದ್ದಾರೆ .
ಐಆರ್‌ಸಿಟಿಸಿ ಗ್ರಾಹಕರು ವೆಬ್‌ನಲ್ಲಿ ಮತ್ತು ಅಪ್ಲಿಕೇಶನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಆರ್‌ಸಿಟಿಸಿ, “ತಾಂತ್ರಿಕ ಕಾರಣಗಳಿಂದ ಟಿಕೆಟ್ ಸೇವೆ ಲಭ್ಯವಿಲ್ಲ. ನಮ್ಮ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸುತ್ತಿದೆ. ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದ ತಕ್ಷಣ ನಾವು ತಿಳಿಸುತ್ತೇವೆ,” ಎಂದು ಹೇಳಿದೆ.
ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಲಾಗ್ ಇನ್ ಆದಾಗ, ‘ನಿರ್ವಹಣೆಯ ಚಟುವಟಿಕೆಯಿಂದಾಗಿ ಇ-ಟಿಕೆಟ್ ಸೇವೆ ಲಭ್ಯವಿಲ್ಲ. ದಯವಿಟ್ಟು ನಂತರ ಪ್ರಯತ್ನಿಸಿ’ ಎಂಬ ಸಂದೇಶ ಕಾಣಿಸುತ್ತಿದೆ.
ಟಿಕೆಟ್ ರದ್ದತಿ/ಟಿಡಿಆರ್ ಸಲ್ಲಿಕೆಗೆ ಗ್ರಾಹಕ ಸೇವಾ ಸಂಖ್ಯೆ 14646, 0755-6610661 & 0755-4090600 ಅಥವಾ etickets@irctc.co.inಗೆ ಮೇಲ್ ಮಾಡಬಹುದು ಎಂದು ಐಆರ್‌ಸಿಟಿಸಿ ಹೇಳಿದೆ.