ಗದಗ: ಸರ್ಕಾರವು ನಿಗದಿಪಡಿಸಿದಂತೆ ಅಧಿಕಾರ ವಿಕೇಂದ್ರೀಕರಣ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಉಪಾಧ್ಯಕ್ಷರ ಆಡಳಿತ ಅವಧಿ ಎರಡುವರೆ ವರ್ಷದ ನಿಯಮದಂತೆ ಜಿಲ್ಲೆಯ ಅಸುಂಡಿ ಗ್ರಾಮ ಪಂಚಾಯಿತಿಗೆ ಜುಲೈ 24 ರಂದು ಬುಧವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯಿತು ನೂತನ ಅಧ್ಯಕ್ಷರಾಗಿ ತಾಜುದ್ದೀನ ಓಲೇಕಾರ, ಉಪಾಧ್ಯಕ್ಷೆಯಾಗಿ ಶಶಿಕಲಾ ಹೊಸಮನಿ ಅವಿರೋಧವಾಗಿ ಆಯ್ಕೆಯಾದರು.
ಆಯ್ಕೆಗೊಂಡ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಮಾಜಿ ಶಾಸಕ ಡಿ ಆರ್ ಪಾಟೀಲ ಸೇರಿದಂತೆ ಸದಸ್ಯರಾದ ಸೋಮರೆಡ್ಡಿ ರಾಮನಹಳ್ಳಿ, ರಾಘವೇಂದ್ರ ಹುಲಕೋಟಿ, ಟಿ ಎಚ್ ಮಾಡಳ್ಳಿ, ವೈ ಬಿ ಬಸವರೆಡ್ಡಿಅವರ, ಎಚ್ ಕೆ ಭೂಮಕ್ಕನವರ್ ಹಾಗೂ ಸರ್ವ ಸದಸ್ಯರು ಹಾಗೂ ಊರಿನ ಗುರು-ಹಿರಿಯರು ಅಭಿನಂದಿಸಿದರು.