ಶಾಸಕರ ಅಮಾನತು ಖಂಡಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಬಿಜೆಪಿಯ 10 ಶಾಸಕರ ಅಮಾನತು, ಕೃಷಿ ತಿದ್ದುಪಡಿ ವಿಧೇಯಕ ವಾಪಾಸ್ ನಿರ್ಧಾರ ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬಿಜೆಪಿಯಿಂದ ಪ್ರತಿಭಟನೆ ನಡೆಯಿತು ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರದಕ್ಷಿಣೆ ಹಾಕಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಉಗ್ರರಿಗೆ ಆಶ್ರಯ ನೀಡುತ್ತಿರುವ ರಾಜ್ಯ ಸರ್ಕಾರ,
ನ್ಯಾಯ ಕೇಳಿದ ಶಾಸಕರಿಗೆ ಅಮಾನತು ಭಾಗ್ಯ ನೀಡಿದ ಸರದಕಾರ,ಶಾಲೆ ಪಕ್ಕದಲ್ಲಿ ಗಾಂಜಾ ಚಾಕಲೇಟ್ ಭಾಗ್ಯ ನೀಡಿದ ಸರ್ಕಾರ ಎಂದು ಸರ್ಕಾರದ ವಿರುದ್ಧ ವಿವಿಧ ಬರಹದ ಪ್ಲಕ್ ಕಾರ್ಡ್ ಪ್ರದರ್ಶಿಸಿ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರ ಎಸ್ ವಿ ಸಂಕನೂರ,ಸೇರಿದಂತೆ ಬಿಜೆಪಿ ಮುಖಂಡು,ಕಾರ್ಯಕರ್ತರು ಹಾಜರಿದ್ದರು.

 

Share this Article