ಗದಗ:ಬಹುತೇಕ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರು ಹಂತ ಹಂತವಾಗಿ ತನ್ನ ಆರ್ಥಿಕ ಹೊರೆಯನ್ನು ಬಹುತೇಕ ಮಧ್ಯದ ದರ ಏರಿಸಿಯೇ ಪ್ರತಿ ವರ್ಷವೂ ಹೆಚ್ಚಿನ ಆದಾಯ ನಿರೀಕ್ಷಿಸುತ್ತದೆ.
ಈ ಬಾರಿ ಕಾಂಗ್ರೆಸ್ ಬಜೆಟನಲ್ಲಿ ಸಿ ಎಂ ಸಿದ್ಧರಾಮಯ್ಯ ಮಧ್ಯದ ದರವನ್ನು 20% ಏರಿಕೆ ಮಾಡಿ ಘೋಷಣೆ ಮಾಡಿದರು ಆದರೆ ಆ 20% ಯಾವಾಗಿನಿಂದ ಜಾರಿ ಮಾಡುತ್ತಾರೊ ಅಂದಿನಿಂದ ಮಧ್ಯದ ದರ ಏರಿಕೆ ಮಾಡಬೇಕು ಅಲ್ಲಿಯವರೆಗೂ ಹಾಲಿ ದರಕ್ಕೆ ಮಧ್ಯ ನೀಡಬೇಕು ಆದರೆ ಗದಗ ನಗರದಲ್ಲಿ ಸರ್ಕಾರದ ಆದೇಶಕ್ಕೂ ಮುನ್ನವೇ ಹಾಲಿ ಮಧ್ಯದ ದರ ಬಿಟ್ಟು ಹಳೇ ದರವೇ ಇದ್ದ ಬಾಟಲಿಗಳಿಗೆ 20% ಏರಿಕೆ ಮಾಡಿ ಸರ್ಕಾರದ ಹೊಸ ದರ ಎಂದು ಮಾರಾಟ ಮಾಡುತ್ತಿದ್ದಾರೆ.
ನಗರದ ಪ್ರಮುಖ ಬಾರ ಮತ್ತು ರೆಸ್ಟೋರೆಂಟಗಳಲ್ಲಿ ನಿನ್ನೆಯವರೆಗೂ ಇದ್ದ ದರ ಹಾಲಿ ದರ ಬುಧವಾರದಿಂದ ಏಕಾಏಕಿಯಾಗಿ ಬದಲಾವಣೆಯಾಗಿದೆ ಆದರೆ ವಿವಿಧ ಬ್ರ್ಯಾಂಡಗಳ ಮೇಲೆ ಎಂಆರ್ ಪಿ ಬದಲಾಗಿಲ್ಲ ಆದರೆ ಬಾರ ಮತ್ತು ರೆಸ್ಟೋರೆಂಟ ಅಂಗಡಿಯವರ ಬಿಲ್ಲುಗಳ 20% ಏರಿಕೆಯಾಗಿದೆ.
ಯಾವ ಯಾವ ಮಧ್ಯ ಬೆಲೆ ಹೆಚ್ಚಿಸಿದ್ದಾರೆ:
ಬ್ಯಾಗ ಪೇಪರ ವಿಸ್ಕಿ ಎಂಆರ್ ಪಿ 109 ಆದರೆ ಮಾರಾಟ ಮಾಡುತ್ತಿದ್ದು 145 ರೂಪಾಯಿ,ಐಬಿ 220 ಎಂ ಆರ್ ಪಿ ಆದರೆ ಮಾರಾಟ ಮಾಡುತ್ತಿದ್ದು 290-310 ತನಕ ಹೀಗೆ ಬಿಯರ್ ಸೇರಿದಂತೆ ಎಲ್ಲ ಮಧ್ಯದ ದರವನ್ನು ಬಾರ ಮಾಲೀಕರು ಹೆಚ್ಚಿಸಿದ್ದಾರೆ.
ಹೆಚ್ಚಿನ ದರ ಯಾಕೆ ಅಂತ ಪ್ರಶ್ನೆ ಮಾಡಿದರೆ ನಾಳೆಯಿಂದ ದರ ಬದಲಾವಣೆ ಆಗಿದೆ ನಾವು ಇಂದೇ ನಮ್ಮ ಅಂಗಡಿಯಲ್ಲಿ ಹೆಚ್ಚಿಗೆ ಮಾಡಿದೇವೆ ಅಂತಾ ಬಾರ ಮಾಲೀಕರು ಹೇಳುತ್ತಾರೆ.
ಸರ್ಕಾರ ಆದೇಶದ ದಿನ ದಿಂದ ದರಗಳಲ್ಲಿ ಬದಲಾವಣೆ ಮಾಡಬೇಕಾದ ಬಾರ ಮಾಲೀಕರು ಆದೇಶಕ್ಕೂ ಮುನ್ನವೇ ಬದಲಾವಣೆ ಮಾಡಿ ಮನಸ್ಸೋ ಇಚ್ಚೆಯಂತೆ ಮಧ್ಯ ಮಾರಾಟ ಮಾಡುತ್ತಿದ್ದಾರೆ ಕೂಡಲೇ ಅಬಕಾರಿ ಅಧಿಕಾರಿಗಳು ಇಂತ ಬಾರ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವಂತೆ ಮಧ್ಯ ಪ್ರಿಯರು ಆಗ್ರಹಿಸಿದ್ದಾರೆ.