ಅಪ್ರಾಪ್ತ ವಯಸ್ಸಿನ ದ್ವಿಚಕ್ರ ವಾಹನ ಚಾಲನೆ ಸೇರಿದಂತೆ ದೋಷಪೂರಿತ ಸೈಲೆನ್ಸರ್ ವಿರುದ್ಧ ಪೋಲಿಸ ಇಲಾಖೆ ವಿಶೇಷ ಕಾರ್ಯಾಚರಣೆ 95 ಪ್ರಕರಣ ದಾಖಲು

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಇಂದು ಬೆಳಿಗ್ಗೆಯಿಂದ ದ್ವಿಚಕ್ರ ವಾಹನ ಸವಾರರಿಗೆ ಅದರಲ್ಲೂ ಪ್ರತ್ಯೇಕವಾಗಿ ದ್ವಿಚಕ್ರ ವಾಹನಗಳಿಗೆ ಅಳವಡಿಸಿದ ದೋಷಪೂರಿತ ಸೈಲೆನ್ಸರ್ ವಶಪಡಿಸಿಕೊಳ್ಳುವುದು ಜೊತೆಗೆ & ಗ್ಯಾರೇಜ್ / ಅಟೋಮೊಬೈಲ್ ಅಂಗಡಿಗಳಲ್ಲಿರುವ ದೋಷಪೂರಿತ ಸೈಲೆನ್ಸರ್ ವಶಪಡಿಸಿಕೊಂಡು ಹಾಗೂ ಅಪ್ರಾಪ್ತ ವಯಸ್ಸಿನವರು ದ್ವಿಚಕ್ರ ವಾಹನ ಚಾಲನೆ ಮಾಡುವವರ ವಿರುದ್ಧ ಗದಗ-ಬೆಟಗೇರಿ ಅವಳಿ ನಗರದಲ್ಲಿ ಟ್ರಾಫಿಕ್ ಪೋಲಿಸರೊಂದಿದೆ ನಗರದ ಒಟ್ಟು 27 ಸ್ಥಳಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡು ಪೋಲಿಸನಇಲಾಖೆ ಒಟ್ಟು 95 ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣಗಳ ವಿವರ: 

ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್ ವಶಕ್ಕೆ ಪಡೆದುಕೊಂಡು 32 ಪ್ರಕರಣ, ಗ್ಯಾರೇಜ್ & ಇತರೆ ಸ್ಥಳಗಳಲ್ಲಿ ದೋಷಪೂರಿತ 8 ಸೈಲೆನ್ಸರ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲುಮಾಡಿದ್ದಾರೆ. ಮತ್ತು ಅಪ್ರಾಪ್ತ ವಯಸ್ಸಿನವರ ಚಾಲನೆ ವಿರುದ್ಧ 55 ಪ್ರಕರಣ ದಾಖಲುಮಾಡಿ ಕಾನೂನು ಕ್ರಮ ಜರುಗಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಗದಗ ಡಿಎಸ್ ಪಿ ಸೇರಿದಂತೆ 5 ಪಿಐ,8ಪಿಎಸ್ಐ,22 ಎಎಸ್ಐ,ಹಾಗೂ ಪೋಲಿಸ್ ಸಿಬ್ಬಂದಿ ಸೇರಿದಂತೆ ಒಟ್ಟು 55 ಜನ ಪೋಲಿಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

Share this Article