ಗದಗ: ಸಿಇಐಆರ್ ತಂತ್ರಜ್ಞಾನದ ಮೂಲಕ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಕದ್ದ ಅಥವಾ ಅಜಾಗರೂಕತೆಯಿಂದ ಜಾತ್ರೆ, ಸಂತೆ, ಬಸ್ ಪ್ರಯಾಣ ಹೀಗೆ ಜನನಿಬಿಡಿ ಪ್ರದೇಶದಲ್ಲಿ ಕಳೆದುಹೋದ 82 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ,ಎಸ್ ನೇಮಗೌಡ ನೇತೃತ್ವದಲ್ಲಿ ಶನಿವಾರ ಮರಳಿ ಮಾಲೀಕರಿಗೆ ಹಿಂತಿರುಗಿಸಿದರು.
ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಪತ್ತೆ:
ಜಿಲ್ಲೆಯ ಗದಗ ನಗರ ಠಾಣೆ 3, ಗ್ರಾಮೀಣ ಠಾಣೆಯಿಂದ 5,ಬೆಟಗೇರಿ ಠಾಣೆ 2, ರಾಜೀವ್ ಗಾಂಧಿ ಬಡಾವಣೆ ಠಾಣೆ 4, ಲಕ್ಷ್ಮೇಶ್ವರ ಠಾಣೆ 3, ಶಿರಹಟ್ಟಿ 3, ನರಗುಂದ 5, ರೋಣ 8, ಸೆನ್ 6,ಗಜೇಂದ್ರಗಡ ಠಾಣೆ 4,ಮುಂಡರಗಿ ಠಾಣೆ 10,ನರೇಗಲ್ಲ ಠಾಣೆ 1,ಟೆಚ್ ಸೆಲ್ 28 ಹೀಗೆ ಜಿಲ್ಲೆಯ ಎಲ್ಲಾ ಠಾಣೆಗಳಿಂದ ಸುಮಾರು 12,11,000 ರೂ. ಮೌಲ್ಯದ 82 ಮೊಬೈಲ್ ಪೋನಗಳನ್ನು ಪತ್ತೆಹಚ್ಚಿ ಸಿಕ್ಕಿರೋ ಮೊಬೈಲ್ ಗಳನ್ನು ಪೋಲಿಸ್ ಇಲಾಖೆ ಮರಳಿ ಮಾಲೀಕರಿಗೆ ನೀಡಿದ್ದಾರೆ.
ಈ ಕುರಿತು ಒಟ್ಟು 1506 ಸೊಮೊಟೊ ಕೇಸ್ ದಾಖಲಿಸಿಕೊಂಡಿದ್ದ ಪೋಲಿಸ್ ಇಲಾಖೆ ಸಾರ್ವಜನಿಕರಿಂದ ಮಾಹಿತಿ ತೆಗೆದುಕೊಂಡು ಮೊಬೈಲ್ ಪತ್ತೆ ಮಾಡಿದ್ದಾರೆ.
ಈ ಹಿಂದೆಯೂ ಕೂಡಾ ಗದಗ ಜಿಲ್ಲಾ ಪೋಲಿಸರು 395 ಮೊಬೈಲ್ ಗಳನ್ನ ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದುರುಗಿಸಿದ್ದರು ಈಗ ಮತ್ತೆ 82 ಮೊಬೈಲ್ ಗಳ ಪತ್ತೆ ಮಾಡಿ ಮಾಲೀಕರಿಗೆ ಮರಳಿ ನೀಡಿದ್ದಾರೆ.
ಗದಗ ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.