ಗದಗ: ಅಧಿಕಾರ ದಾಹಕ್ಕಾಗಿ ಚುನಾವಣಾ ಸಂದರ್ಭದಲ್ಲಿ ಪೋಷಿಸಿದ ಅವೈಜ್ಞಾನಿಕ ಗ್ಯಾರಂಟಿ ಗಳ ಜಾರಿಗೆ ಶೇಕಡ 26ರಷ್ಟು ಸಾಲ ಪಡೆಯಲು ಸರ್ಕಾರ ತೀರ್ಮಾನಿಸಿದೆ ಗ್ಯಾರಂಟಿ ಯೋಜನೆ ಜಾರಿಗಾಗಿ ಜನಸಾಮಾನ್ಯರ ಮೇಲೆ ತೆರಿಗೆ ಬಾರ ಹೇರಿ ಕಾಂಗ್ರೆಸ್ ಸರ್ಕಾರ ಒಂದು ಕಡೆ ಉಚಿತ ಕೊಟ್ಟು ಇನ್ನೊಂದು ಕಡೆ ತೆರೆಗೆ ಹೆಚ್ಚಿಸಿ ಜನರಿಂದ ಹಣ ಕಿತ್ತುಕೊಳ್ಳುವ ರಾಜ್ಯ ಸರ್ಕಾರ ಕ್ರಮ ಸರಿಯಲ್ಲ ಎಂದು ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುರ್ತಕೋಟಿ ಹೇಳಿದ್ದಾರೆ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು 2023-24 ನೇ ಸಾಲಿನ ಬಜೆಟ್ ಸಂಪೂರ್ಣ ಹುಸಿಯಾಗಿದೆ
ಕಳೆದ ಬಾರಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಕೇಂದ್ರದ ಬಿಎಪಿ ಎಂ ಸಿ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಲು ತೀರ್ಮಾನಿಸಿದೆ, ಗೋವುಗಳ ಸoರಕ್ಷಣೆಗಾಗಿ ಘೋಷಿಸಲಾದ ಜಿಲ್ಲೆ ಗೊಂದು ಗೋಶಾಲೆ ಜೊತೆಗೆ ಅನೇಕ ಯೋಜನೆಗಳನ್ನು ನೀಡಿದ ಬಿಜೆಪಿ ಸರ್ಕಾರದ ಉದ್ದೇಶಿತ ಜನಪರ ಯೋಜನೆಗಳನ್ನು ಕೈ ಬಿಟ್ಟಿರುವುದು ಖಂಡನಾರ್ಹ ಎಂದು ಹೇಳಿದ್ದಾರೆ.