ಬೀದಿನಾಯಿಗಳ ದಾಳಿಗೆ ತುತ್ತಾದ ಬಾಲಕ : ಗಂಬೀರ ಗಾಯ ಸ್ಥಳೀಯ ಆಡಳಿತ ಮಂಡಳಿ ವಿರುದ್ಧ ಪಾಲಕರ ಆಕ್ರೋಶ

graochandan1@gmail.com
1 Min Read

ಗಜೇಂದ್ರಗಡ: ಕೋಟೆನಾಡು ಗಜೇಂದ್ರಗಡದಲ್ಲಿ ಬೀದಿನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಪ್ರತಿ ನಿತ್ಯವೂ ಕೂಡಾ ಬೀದಿನಾಯಿಗಳ ಹಾವಳಿಗೆ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.

ಅದರಂತೆ ಶುಕ್ರವಾರ ಹಿರೇ ಬಜಾರದಲ್ಲಿನ ದಾನಿಯವರ ಮನೆಯ ಹತ್ತಿರ ದಾರಿಯಲ್ಲಿ ಸಾಗುತ್ತಿದ್ದ ಬಾಲಕನ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ಮಾಡುವ ಮೂಲಕ ಗಂಬೀರ ಗಾಯಗಳು ಮಾಡಿವೆ.

ನಗರದ ಶಿವಾಜಿ ಪೇಟೆಯ ಹನಮಂತ ಪವಾರ ದಂಪತಿಯ ಪುತ್ರ ಆದಿ ಹನುಮಂತ ಪವಾರ ಎಂಬುವವನಿಗೆ ಬೀದಿನಾಯಿಗಳು ದಾಳಿ ಮಾಡಿ ಮನಸ್ಸೊಚ್ಚೆಯಂತೆ ಎಲ್ಲಿ ಬೇಕಾದಲ್ಲಿ ಕಚ್ಚಿ ಗಂಬೀರ ಗಾಯಗಳುಂಟು ಮಾಡಿವೆ.

 

- Advertisement -
Ad image

ಬಳಿಕ ಓಣಿಯ ನಿವಾಸಿಗಳು ಬಾಲಕನನ್ನು ಬೀದಿನಾಯಿಗಳಿಂದ ರಕ್ಷಿಸಿ ಆಸ್ಪತ್ರೆ ಸೇರಿದರು.

ಬಳಿಕ ಬಾಲಕನ ತಂದೆ ಹನಮಂತ ಪವಾರ ಮಾತನಾಡಿ ಹಿರೇ ಬಜಾರದ ಮಾರ್ಗದಲ್ಲಿ ಹೆಚ್ಚು ಬೀದಿನಾಯಿಗಳು ಇವೆ.ಚಿಕ್ಕ ಮಕ್ಕಳು, ವಯೋ ವೃದ್ಧರು , ಬೈಕ ಸವಾರರನ್ನು ಬೆನ್ನು ಬಿಡದೆ ಅಟ್ಟಿ ಕಚ್ಚುತ್ತವೆ.ಇದಕ್ಕೆ ಪುರಸಭೆಯವರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

Share this Article