ಗದಗ: ಉದ್ಯಾನವನಗಳಲ್ಲಿ ಉದಯರಾಗ ಕಾರ್ಯಕ್ರಮವು ರವಿವಾರ ಬೆಳಗ್ಗೆ ೬.೩೦ ರಿಂದ ೭.೩೦ರ ವರೆಗೆ ನಗರದ ರಾಜೀವಗಾಂಧೀ ನಗರದ ಶಿವಶರಣ ಹರಳಯ್ಯ ಉದ್ಯಾನವನ, ವಿಶ್ವೇಶ್ವರಯ್ಯ ನಗರದ ವಿಶ್ವೇಶ್ವರಯ್ಯ ಉದ್ಯಾನವನ ಹಾಗೂ ಕಿತ್ತೂರ ಚನ್ನಮ್ಮ ಉದ್ಯಾನವನದಲ್ಲಿ ಜರುಗಿತು. ಶಿವಶರಣ ಹರಳಯ್ಯ ಉದ್ಯಾನವನದಲ್ಲಿ ರಾಜೇಶ್ವರಿ ಸಜ್ಜನ ಅವರಿಂದ ಸುಗಮ ಸಂಗೀತ, ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ಮಲ್ಲಿಕಾರ್ಜುನ ನೇಗಿನಾಳ ಅವರಿಂದ ವಚನ ಸಂಗೀತ ಹಾಗೂ ಕಿತ್ತೂರ ಚನ್ನಮ್ಮ ಉದ್ಯಾನವನದಲ್ಲಿ ಅಕ್ಷತಾ ಹಿರೇಮಠ ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು.
ಸಾಯಂಕಾಲ ೫.೩೦ ರಿಂದ ೬.೩೦ ರ ವರೆಗೆ ನಗರದ ಭೀಷ್ಮ ಕೆರೆಯ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಜರುಗಿದ ಸಂಧ್ಯಾರಾಗ ಕಾರ್ಯಕ್ರಮದಲ್ಲಿ ಶಿವಬಸಯ್ಯ ಗಡ್ಡದಮಠ ಅವರಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಜರುಗಿತು.