ಸಂಚಾರ ನಿಯಂತ್ರಣಕ್ಕಾಗಿ ಸೆಗ್ ವೇ ಇಲೆಕ್ಟ್ರಿಕ್ ಸ್ಕೂಟರಗಳಿಗೆ ಚಾಲನೆ

graochandan1@gmail.com
1 Min Read

ಗದಗ  : ಪೊಲೀಸ್ ಇಲಾಖೆಯಿಂದ ನಗರದ ವಿವಿಧ ರಸ್ತೆಗಳಲ್ಲಿನ ಸಂಚಾರಿ ವ್ಯವಸ್ಥೆ ನಿಯಂತ್ರಣಕ್ಕಾಗಿ ಹಾಗೂ ಕಾನೂನು ಸುವ್ಯವಸ್ಥೆ ಸರಾಗವಾಗಿ ನಡೆಯುವಂತೆ ನಿಗಾವಹಿಸಲು ಸೆಗ್ ವೇ ಇಲೆಕ್ಟ್ರಿಕ್ ಸ್ಕೂಟರಗಳ ಸಂಚಾರವನ್ನು ಆರಂಭಿಸಿದೆ.

ನಗರದ ಟಾಂಗಾ ಕೂಟದಲ್ಲಿ ರವಿವಾರ ಸೆಗ್ ವೇ ಇಲೆಕ್ಟ್ರಿಕ್ ಸ್ಕೂಟರಗಳಿಗೆ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಕ್ರೀಡಾಧಿಕಾರಿ ವಿಠ್ಠಲ ಜಾಬಗೌಡರ, ವಾರ್ತಾಧಿಕಾರಿ ವಸಂತ ಮಡ್ಲೂರ, ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

- Advertisement -
Ad image

Share this Article